ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಎಚ್‍.ಡಿ.ದೇವೇಗೌಡರಿಗೆ ಕರೆ !

Kannada News

29-05-2017

ಬೆಂಗಳೂರು:- ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮಾಜಿ ಪ್ರಧಾನಿ ಎಚ್‍.ಡಿ.ದೇವೇಗೌಡ ಅವರನ್ನು ಕಾಂಗ್ರೆಸ್‍ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೂರಾವಾಣಿ ಕರೆ ಮೂಲಕ ಕೋರಿದ್ದಾರೆ. ದೇವೇಗೌಡರಿಗೆ ಕರೆ ಮಾಡಿರುವ ಸೋನಿಯಾ ಗಾಂಧಿ ಅವರು, “ಎನ್‍ಡಿಎ ಅಭ್ಯರ್ಥಿಗೆ ವಿರೋಧವಾಗಿ ಮತ್ತು ಪ್ರತಿಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ತಾವು ಸೂಕ್ತ ಅಭ್ಯರ್ಥಿ, ಅನುಭವದ ದೃಷ್ಟಿಯಿಂದ ಮತ್ತು ಎಲ್ಲ ವಿರೋಧ ಪಕ್ಷಗಳ ಸಹಮತದ ದೃಷ್ಟಿಯಿಂದ ತಾವೇ ಅಭ್ಯರ್ಥಿಯಾಗಬೇಕು” ಎಂಬ ಪ್ರಸ್ತಾವ ಮುಂದಿಟ್ಟರು ಎಂದು ತಿಳಿದು ಬಂದಿದೆ. ಆದರೆ ಈ ಪ್ರಸ್ತಾವವನ್ನು ಸ್ವೀಕರಿಸಲು ನಿರಾಕರಿಸಿರುವ ದೇವೇಗೌಡರು, “ನಾನು ರಾಜ್ಯ ರಾಜಕಾರಣ ಬಿಟ್ಟು ಬರಲು ನನಗೆ ಮನಸ್ಸಿಲ್ಲ. ಆದರೆ ವಿರೋಧ ಪಕ್ಷಗಳ ಸೂಚಿಸುವ ಅಭ್ಯರ್ಥಿಗೆ ನನ್ನ ಪಕ್ಷದ ಬೆಂಬಲವಿದೆ” ಎಂದು ತಿಳಿಸಿದ್ದಾರೆ, ಎಂದು ತಿಳಿದು ಬಂದಿದೆ. 
 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ