ಒಂದೇ ತಾಲ್ಲೂಕಿನ ಇಬ್ಬರು ರೈತರ ಆತ್ಮಹತ್ಯೆ

2 Farmers committed suicide in mysore!

21-07-2018

ಮೈಸೂರು: ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರಲ್ಲಿ ನಡೆದಿದೆ. ಸಾಲ ಬಾಧೆಗೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ. ಜಿಲ್ಲೆಯ ಹುಣಸೂರು ತಾಲ್ಲೂಕಿನ ಹನಗೋಡಿನ ರೈತ ಪ್ರಶಾಂತ್ (29) ನೇಣು ಬಿಗಿದುಕೊಂಡಿದ್ದರೆ, ಇದೇ ತಾಲ್ಲೂಕಿನ ತಟ್ಟೆಕೆರೆ ಗ್ರಾಮದ ವಸಂತ(41) ಎಂಬ ರೈತ ಕ್ರಿಮಿನಾಶಕ ಸೇವಿಸಿ ತನ್ನ ಜಮೀನಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಮಾರು 12ಲಕ್ಷ ಸಾಲ ಮಾಡಿಕೊಂಡಿದ್ದ ರೈತ ಪ್ರಶಾಂತ್. ತನ್ನ 12 ಎಕರೆಯಲ್ಲಿ ಶುಂಠಿ, ಬದನೆ, ಜೋಳ ಬೆಳೆದಿದ್ದರು. ನಿರಂತರ ಮಳೆಯಿಂದಾಗಿ ಬೆಳೆ ಕೈಗೆ ಬಾರದೆ ನಷ್ಟ ಅನುಭವಿಸಿದ್ದು, ಇದರಿಂದ ಮನನೊಂದು ತನ್ನ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ರೈತ ವಸಂತ ಎಸ್ಬಿಐ ಬ್ಯಾಂಕಿನಲ್ಲಿ 4ಲಕ್ಷ ಸಾಲ ಮಾಡಿಕೊಂಡಿದ್ದು, ಸಾಕಷ್ಟು ಕೈ ಸಾಲವನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲ ತೀರಿಸಲಾಗದೆ ಮನನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡೂ ಪ್ರಕರಣಗಳು ಹುಣಸೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.


ಸಂಬಂಧಿತ ಟ್ಯಾಗ್ಗಳು

Farmer suicide ಶುಂಠಿ ಕ್ರಿಮಿನಾಶಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ