ಈ ವಿಚಿತ್ರ ಜನರ ಪ್ರತಿ ದಿನ ಆಹಾರವೇ ನಾಯಿ-ಬೆಕ್ಕಂತೆ!

There is a gang in bengAluru: their food habit is to eat dog and cat!

21-07-2018

ಬೆಂಗಳೂರು: ಬೆಂಗಳೂರಿಗೆ ನಾಯಿ, ಬೆಕ್ಕು ತಿನ್ನುವ ವಿಚಿತ್ರ ಜನ ಎಂಟ್ರಿ ಕೊಟ್ಟಿದ್ದಾರೆ. ಬೆಕ್ಕನ್ನು ಕತ್ತರಿಸಿ ಸುಟ್ಟು ತಿನ್ನುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಎಂತಹವರಿಗೂ ಭಯ ಹುಟ್ಟಿಸುವಂತಿದೆ. ನಾಯಿ ಬೆಕ್ಕುಗಳನ್ನು ಸುಟ್ಟು ತಿನ್ನುವ ವಿಚಿತ್ರ ಜನರು ವಿಜಯನಗರದ ಆದಿ ಚುಂಚನಗಿರಿ ಮಠದ ಎದುರಿನ ಸರ್ವೀಸ್​ ರಸ್ತೆಯಲ್ಲಿ ಬೀಡುಬಿಟ್ಟಿದ್ದಾರೆ. ಇವರೆಲ್ಲರೂ ತಮಿಳುನಾಡಿನಿಂದ ಬಂದಿರುವವರು ಎಂದು ಹೇಳಲಾಗುತ್ತಿದೆ. ಆಹಾರಕ್ಕಾಗಿ ಚೆಕ್ಕುಗಳನ್ನು ಸಾಯಿಸಿ ವಿಚಿತ್ರ ರೀತಿಯ ಭೋಜನ ಮಾಡುತ್ತಿರುವುದು ಕಂಡು ಬಂದಿದೆ. ಸುಮಾರು ಒಂದು ತಿಂಗಳಿನಿಂದ ವಿಜಯನಗರದಲ್ಲೇ ಬೀಡು ಬಿಟ್ಟಿದ್ದಾರೆ ಈ ವಿಚಿತ್ರ ಜನ. ಇವರ ಆಹಾರದ ಪದ್ಧತಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ನಿನ್ನೆ ಮಧ್ಯಾಹ್ನ ಬೀದಿ ನಾಯಿ ಕೊಂದು ಅದನ್ನೇ ಮಧ್ಯಾಹ್ನದ ಊಟಕ್ಕೆ ಸೇವಿಸಿದ್ದಾರೆ. ಮಹಿಳೆಯರು, ಮಕ್ಕಳು ಸೇರಿ ಸುಮಾರು 10ಕ್ಕೂ ಹೆಚ್ಚು ಜನರಿದ್ದಾರೆ. ಕಲ್ಲು ಕುಟ್ಟುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಗುಂಪನ್ನು ನಿನ್ನೆ ಸಾರ್ವಜನಿಕರ ವಿರೋಧಕ್ಕೆ ಪೊಲೀಸರ ಸಹಾಯದಿಂದ ಬಿಡಾರ ಎಬ್ಬಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

CAT-DOG group ಸಹಾಯ ಸರ್ವೀಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ನಾಯಿಗಳನ್ನು ಬೇಕಾದರೆ ತಿನ್ನಲಿ, ಆದರೆ ಆ ಮುದ್ದಾದ ನಿರುಪದ್ರವಿ ಬೆಕ್ಕುಗಳನ್ನು ಬಿಟ್ಟುಬಿಡಲಿ . BBMP ಬದಲು ಇವರಾದರೂ ನಾಯಿ ಹಿಡಿಯುತ್ತಾರೆ
  • Karthik
  • Professional