‘ಸದನದಲ್ಲಿ ಸೋಲಾದರೂ ಜನರ ವಿಶ್ವಾಸ ಗೆದ್ದಿದ್ದಾರೆ’

oppsitions won peoples Confidence: u.t.khader

21-07-2018

ಮಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ನಡೆದ ಅವಿಶ್ವಾಸ ಗೊತ್ತುವಳಿಯಲ್ಲಿ ವಿಪಕ್ಷಗಳಿಗೆ ಸೋಲಾಗಿರುವ ವಿಚಾರದ ಕುರಿತು, ಮಂಗಳೂರಲ್ಲಿ ಮಾತನಾಡಿದ ಸಚಿವ ಯು.ಟಿ.ಖಾದರ್ ‘ಸದನದಲ್ಲಿ ಸೋಲಾದರೂ ಜನರ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಿಶ್ವಾಸ ಗೊತ್ತುವಳಿ ಸಹಜ ಪ್ರಕ್ರಿಯೆ. ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಸಾಕಷ್ಟು ವಿಷಯಗಳ ಕುರಿತು ಸುಧೀರ್ಘ ಚರ್ಚೆ ಆಗಿದೆ. ಕೇಂದ್ರ ಸರ್ಕಾರದ 4ವರ್ಷಗಳ ಸಾಧನೆ ಏನು ಎಂಬುದು ಕೂಡ ಜನರಿಗೆ ಗೊತ್ತಾಗಿದೆ’ ಎಂದರು.

ಮುಂದಿನ ತಿಂಗಳು ಆಗಸ್ಟ್‌ 4ರಂದು ಮುಡಾ ಅದಾಲತ್ ನಡೆಯಲಿದೆ. ಸಣ್ಣ ಸೈಟ್ ‌ಗಳಲ್ಲಿ ಮನೆ ನಿರ್ಮಾಣಕ್ಕೆ ಏಕ ಗವಾಕ್ಷಿ ಪದ್ಧತಿ ತರಲಿದ್ದೇವೆ. ಮುಡಾದಲ್ಲಿ ಕಡತ ವಿಲೇವಾರಿ ಸಮಸ್ಯೆ ನಿವಾರಿಸಲು ಸ್ವಯಂ ಚಾಲಿತ ದಾಖಲೀಕರಣ ವ್ಯವಸ್ಥೆ ಮುಂದಿನ ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಎಲ್ಲ ದಾಖಲೆ ಸರಿ ಇದ್ದರೆ ವಾರದೊಳಗೆ ಅನುಮತಿ ಪತ್ರ ದೊರೆಯಲಿದೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ