ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಕಳ್ಳತನ: ನಾಲ್ವರ ಬಂಧನ

theft in the name of smart city officers: police arrested 4thives

21-07-2018

ತುಮಕೂರು: ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳೆಂದು ವಂಚಿಸುತ್ತಿದ್ದ ನಾಲ್ವರು ಕಳ್ಳರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ತುಮಕೂರು, ಮೈಸೂರು, ಬೆಂಗಳೂರು ನಗರಗಳಲ್ಲಿ ಅತಿ ಹೆಚ್ಚು ಜನರನ್ನು ವಂಚಿಸಿದ್ದರು ಎಂಬ ಮಾಹಿತಿಯೂ ತಿಳಿದು ಬಂದಿದೆ. ಒಂಟಿ ಮಹಿಳೆಯರು ಮತ್ತು ವಯಸ್ಸಾದವರು ಇರುವ ಮನೆಗಳೇ ಇವರ ಟಾರ್ಗೆಟ್. ಬಂಧಿತರಿಂದ 500ಗ್ರಾಂ.ಚಿನ್ನ, 2ಲಕ್ಷ 52 ಸಾವಿರ ರೂ.ನಗದು ಸೇರಿದಂತೆ ಒಂದು ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ. ಗಣೇಶ್, ಡಿ.ಎಂ.ರಾಮಚಂದ್ರ, ಫರೀದುಲ್, ಇಂತಿಯಾಸ್ ಮೊಲ್ಲ ಬಂಧಿತ ಆರೋಪಿಗಳು. ಆರೋಪಿಗಳ ಬಂಧನದಿಂದ ತುಮಕೂರು, ಬೆಂಗಳೂರು, ಮೈಸೂರುಗಳಲ್ಲಿ ತಾಲಾ ಎರಡು ಪ್ರಕರಣ ಬೆಳಕಿಗೆ ಬಂದಿವೆ ಎಂದು, ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

smart city thives ಪತ್ರಿಕಾಗೋಷ್ಠಿ ಟಾರ್ಗೆಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ