ಬಡ ಕಾರ್ಮಿಕರಿಗೆ ಮನೆ:ಸಚಿವ ವೆಂಕಟ ರಮಣಪ್ಪ

Home to poor laborers: Minister Venkata Ramanappa

21-07-2018

ಬೆಂಗಳೂರು: ಬಡಕಾರ್ಮಿಕರಿಗೆ ಮನೆ ನೀಡುವ ಚಿಂತನೆಯಿದೆ. ಮನೆ ಕಟ್ಟಿಕೊಳ್ಳುವವರಿಗೆ 5ಲಕ್ಷ  ರೂಪಾಯಿ ನೀಡುತ್ತೇವೆ. ಹಂತ ಹಂತವಾಗಿ ಮನೆಗಳನ್ನು ಕೊಡಲು ನಿರ್ಧರಿಸಿದ್ದೇವೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದ್ದಾರೆ. ಸರ್ವೆ ಮಾಡಿಸಿ ನಿವೇಶನಗಳನ್ನು ನೀಡುತ್ತೇವೆ. ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ನಿರ್ಮಾಣ ಮಾಡಲಾಗುವುದು. ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ್ದೇನೆ ಎಂದು ಸಚಿವ ವೆಂಕಟರಮಣಪ್ಪ ತಿಳಿಸಿದರು.

ಇಂದಿರಾನಗರದ ಇಎಸ್ಐ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟಿದ್ದೆ. ಕೆಲವು ವೈದ್ಯರು ನೆಗ್ಲಿಜೆನ್ಸ್ ಮಾಡಿದ್ರು. ನರ್ಸ್ ಗಳು ಸರಿಯಾಗಿ ಕೆಲಸ ಮಾಡ್ತಿರಲಿಲ್ಲ. ಕೂಡಲೇ ನಿರ್ದೇಶಕ ಕರೆದು ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಹೆಚ್ಚಿನ ಕಾರ್ಮಿಕರು ಒಂದೇ ಆಸ್ಪತ್ರೆಯಲ್ಲಿದ್ದರು. ಅವರನ್ನ ಬೇರೆ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದೇವೆ ಎಂದು ಸಚಿವ ವೆಂಕಟರಮಣಪ್ಪ ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ