ಸಕ್ಕರೆ ಕಾರ್ಖಾನೆ ಎದುರೇ ರೈತ ಆತ್ಮಹತ್ಯೆಗೆ ಶರಣು!

A Farmer committed suicide in front of sugar factory!

21-07-2018

ಬಾಗಲಕೋಟೆ: ಸಕ್ಕರೆ ಕಾರ್ಖಾನೆಗೆ ಪೂರೈಸಿದ್ದ ಕಬ್ಬಿನ ಬಾಕಿ ಹಣ ನೀಡದ ಹಿನ್ನೆಲೆ ರೈತರೊಬ್ಬರು ಸಕ್ಕರೆ ಕಾರ್ಖಾನೆ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ತೇರದಾಳ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಶೇಗುಣಸಿ ಗ್ರಾಮದ ಹನುಮಂತ ಕಾಡಪ್ಪನವರ(47) ಆತ್ಮಹತ್ಯೆ ಮಾಡಿಕೊಂಡ ರೈತ. ತೇರದಾಳ ಸಮೀಪದ ಸಾವರಿನ್ ಸಕ್ಕರೆ ಕಾರ್ಖಾನೆಗೆ ಸುಮಾರು 200ಟನ್ ರಷ್ಟು ಕಬ್ಬು ಕಳುಹಿಸಿದ್ದರು. ಆದರೆ ಈವರೆಗೂ ಕಾರ್ಖಾನೆ ಹಣ ಪಾವತಿಸಿಲ್ಲ. ಅಲೆದಾಡಿ ಅಲೆದಾಡಿ ಬೇಸತ್ತ ರೈತ ಕಾರ್ಖಾನೆ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವರಿನ್ ಸಕ್ಕರೆ ಕಾರ್ಖಾನೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಶಿವಕುಮಾರ್ ಮಲಘಾಣ ಅವರದ್ದಾಗಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ