ಅಮಿತ್ ಶಾ ಹೇಳೊದು ಒಂದು ಮಾಡೋದು ‌ಮತ್ತೊಂದು !

Kannada News

29-05-2017

ಧಾರವಾಡ:- ಸಿಎಂ ಮತ್ತು ಹಾಲಿ ಅಧ್ಯಕ್ಷರು ಮೈಸೂರು ಭಾಗದವರಿದ್ದು, ಉತ್ತರ ಕರ್ನಾಟಕಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವೀರಣ್ಣ ಮತ್ತಿಕಟ್ಟಿ ಹೇಳಿದ್ದಾರೆ. ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು  ಕೇಂದ್ರದಲ್ಲಿ ಪ್ರಭಾವಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಹೈದ್ರಾಬಾದ್ ಕರ್ನಾಟಕದವರು. ಹೀಗಾಗಿ ಅಧ್ಯಕ್ಷ ಸ್ಥಾನ ಉತ್ತರಕರ್ನಾಟಕ ಭಾಗಕ್ಕೆ ಕೊಡಬೇಕು. ಉತ್ತರ ಕರ್ನಾಟಕ ಭಾಗಕ್ಕೆ ನೀಡುತ್ತಾರೆಂಬ ವಿಶ್ವಾಸವಿದ್ದು, ನಮ್ಮ ಅಭಿಪ್ರಾಯಕ್ಕೆ ವರಿಷ್ಠರು ಹೆಚ್ಚು ಬೆಲೆ ಕೊಡುತ್ತಾರೆ ಎನ್ನುವ ನಂಬಿಕೆ ಇದೆ. ಉತ್ತರ ಕರ್ನಾಟಕಕ್ಕೆ ಸ್ಥಾನ ಕೊಟ್ಟರೆ ಪ್ರಾದೇಶಿಕ ಸಮಾನತೆ ಕೊಟ್ಟಂತಾಗುತ್ತದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಮತ್ತೆ ಅಧಿಕಾರಕ್ಕೆ ಬರಬೇಕು ಎಂದರು. ಕೇಂದ್ರ ಮತ್ತು ರಾಜ್ಯ ನಾಯಕರು ಹಾಗೂ  ಆಸ್ಕರ್ ಫರ್ನಾಂಡಿಸ್, ವೇಣುಗೋಪಾಲ್, ನೇತೃತ್ವದಲ್ಲಿ ಮುಂಬರುವ ಚುನಾವಣೆ ನಡೆಯಲಿದೆ. ಬಿಜೆಪಿ ಗೆದ್ದರೂ ಯಡಿಯೂರಪ್ಪಗೆ ಮಂತ್ರಿ ಸ್ಥಾನ ನೀಡಲ್ಲ. ಅಮಿತ್ ಶಾ ಹೇಳೊದು ಒಂದು ಮಾಡೋದು ‌ಮತ್ತೊಂದು ವ್ಯಂಗವಾಡಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ