ಅವಿಶ್ವಾಸ ನಿರ್ಣಯ: ಬಿ.ಎಸ್.ಯಡಿಯೂರಪ್ಪ ಗೇಲಿ

yeddyurappa reaction on, no confidence motion in lok sabha

20-07-2018

ಬೆಂಗಳೂರು: ಸಂಸತ್ ನಲ್ಲಿ ವಿರೋಧ ಪಕ್ಷಗಳು ಒಂದಾಗಿ ಅವಿಶ್ವಾಸ ಮಂಡನೆ ಮಾಡಿರುವುದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಗೇಲಿ ಮಾಡಿದ್ದಾರೆ. ಸೊರಬ ಮತ್ತು ಸಾಗರದ ಇತರೆ ಭಾಗಗಳಲ್ಲಿ ಮಳೆಯಿಂದಾಗಿ ಉಂಟಾಗಿರುವ ಬೆಳೆ ನಾಶ ಹಾಗೂ ಹಾನಿಗಳ ಬಗ್ಗೆ ವೀಕ್ಷಣೆ ನಡೆಸಿದ ನಂತರ ಯಡಿಯೂರಪ್ಪ ಮಾದ್ಯಮಗಳೊಂದಿಗೆ ಮಾತನಾಡಿದರು.

ಭಾರತ ಪ್ರಪಂಚದಲ್ಲಿ 6ನೇ ಶ್ರೀಮಂತ ರಾಷ್ಟ್ರವಾಗಿ ಬೆಳೆಯುತ್ತಿದೆ. ಜಿಎಸ್ ಟಿ ಇಂದ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಂಡಿದೆ. ವಿರೋಧ ಪಕ್ಷಗಳು ಸಮಯ ಹಾಳು ಮಾಡಲು ಸಂಸತ್ ನಲ್ಲಿ ಅವಿಶ್ವಾಸ ಮಂಡನೆ ಮಾಡಿರುವುದು ಕವಡೆ ಕಾಸಿನ ಕಿಮ್ಮತ್ತಿಲ್ಲ. ಇದು ಪೊಲಿಟಿಕಲ್ ಸ್ಟಂಟ್ ಎಂದು ಯಡಿಯೂರಪ್ಪ ಟೀಕಿಸಿದರು. ಕೇವಲ ಸಮಯ ಹಾಳು ಮಾಡುವ ಕೆಲಸಮಾಡಿದ್ದಾರೆ. ನಮಗೆ ಸ್ಪಷ್ಟ ಬಹುಮತವಿದೆ. ಆದರೂ ಇಂತಹ ಕೆಲಸಕ್ಕೆ ವಿರೋಧ ಪಕ್ಷ ಕೈ ಹಾಕಿದೆ. ಅವರು ಗೆಲ್ಲಲ್ಲ ಎಂದರು.

ಸೊರಬದಲ್ಲಿ ಅತಿ ಹೆಚ್ಚು ಬೆಳೆ ನಾಶವಾಗಿದೆ. ಸುಮಾರು 5 ಸಾವಿರ ಎಕರೆ ಬೆಳೆ ನಾಶಗೊಂಡಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕಾಲು ಸಂಕ ಕಾಲುವೆಯಲ್ಲಿ ಸಾವನ್ನಪ್ಪಿದ್ದ ವಿದ್ಯಾರ್ಥಿನಿಗೂ, ರೈತನಿಗೂ ಪರಿಹಾರ ನೀಡಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ