ಪತ್ರಕರ್ತರಿಂದ ಸಮಾಜಕ್ಕೆ ಮತ್ತಷ್ಟು ಸೇವೆ ಸಿಗಲಿ: ಸಚಿವ ಜಿಟಿಡಿ

minister GTD wished and honored to journalists at mysore

20-07-2018

ಬೆಂಗಳೂರು: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಈ ಮೂರೂ ಅಂಗಗಳನ್ನು ಸದಾ ತಿದ್ದುವ ಕೆಲಸ ಮಾಡುವ ಶಕ್ತಿ ಇರೋದು ಪತ್ರಕರ್ತರಿಗೆ ಮಾತ್ರ. ನಿಮ್ಮಿಂದ ಸಮಾಜಕ್ಕೆ ಮತ್ತಷ್ಟು ಸೇವೆ ಸಿಗಲಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪತ್ರಕರ್ತರಿಗೆ ಶುಭ ಹಾರೈಸಿದರು.

ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಪತ್ರಿಕಾ ದಿನಾಚರಣೆ ಆಚರಣೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ಸಚಿವ ಜಿ.ಟಿ.ದೇವೇಗೌಡರು ಸನ್ಮಾನ ಮಾಡಿದರು.

ಬಳಿಕ ಮಾತನಾಡಿದ ಸಚಿವ ಜಿಟಿಡಿ, ಭಾಗಮಂಡಲದಲ್ಲಿ ಮಳೆ ಆಗಿರುವ ಕಾರಣ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಪತ್ರಕರ್ತರ ಏನೇ ಮನವಿ ಇದ್ರೂ ಸ್ವೀಕರಿಸಿ ಎಂದು ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದರು.

ಪತ್ರಕರ್ತರು ನನಗೆ ಹಲವಾರು ವರ್ಷಗಳಿಂದಲೂ ಚಿರಪರಿಚಿತರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಈ ಮೂರೂ ಅಂಗಗಳನ್ನು ಸದಾ ತಿದ್ದುವ  ಕೆಲಸ ಮಾಡುವ ಶಕ್ತಿ ಇರೋದು  ಪತ್ರಕರ್ತರಿಗೆ ಮಾತ್ರ. ಪತ್ರಕರ್ತರಿಗೆ ನಿವೇಶನ ಆಗಬೇಕು ಹಾಗೂ ಆರೋಗ್ಯ ವಿಮೆಯಲ್ಲೂ  ಪತ್ರಕರ್ತನ್ನು ಸೇರಿಸಬೇಕು ಎಂದು ಮನವಿ ಬಂದಿದೆ. ಈ ಎಲ್ಲಾ ಮನವಿಗಳನ್ನು ಅತಿ ಶೀಘ್ರದಲ್ಲಿ  ಜಾರಿಗೊಳಿಸುವಂತೆ ಮಾಡುತ್ತೇವೆ ಎಂದು ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು.

 ಒಂದೇ ಒಂದು ದಿನವಾದರೂ ನನ್ನ ಬಗ್ಗೆ ಕೆಟ್ಟದಾಗಿ ಬರೆದಿದ್ದಾರೆಂದು ಯಾರನ್ನು ಪ್ರಶ್ನೆ ಮಾಡಿಲ್ಲ, ನಮ್ಮ ಬಗ್ಗೆ ನೀವು ಬರೆಯಲೆಬೇಕು. ಆಗ ನಮ್ಮಲ್ಲಿರುವ ದೌರ್ಬಲ್ಯಗಳು ಕಾಣಿಸಲು ಸಾಧ್ಯ, ಪತ್ರಿಕಾರಂಗದಲ್ಲಿ ಬಹಳಷ್ಟು ಅನುಭವ ಪಡೆದಿರುವ ದಿಗ್ಗಜರು ಇದ್ದಾರೆ. ನಿಮ್ಮಿಂದ ಸಮಾಜಕ್ಕೆ ಮತ್ತಷ್ಟು ಸೇವೆ ಸಿಗಲಿ ಎಂದು ಸಚಿವ ಪತ್ರಕರ್ತರನ್ನು ಹಾರೈಸಿದರು.


ಸಂಬಂಧಿತ ಟ್ಯಾಗ್ಗಳು

G.T.Devegowda Health ಪತ್ರಿಕಾರಂಗ ಪತ್ರಕರ್ತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ