ಬಾಕಿ ಇದ್ದ ತನ್ನ ಹಣ ಕೇಳಿದ್ದೇ ತಪ್ಪಾಯ್ತಾ?

brutally assault on man by a gang

20-07-2018

ಬೆಂಗಳೂರು: ಸುಮಾರು 25ಲಕ್ಷ ಬಾಕಿ ಹಣ ಕೇಳಿದ್ದಕ್ಕೆ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಕೃತ್ಯ ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟ್‍ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಜೋಸೆಫ್ (40) ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡು ಮೂಲದ ಬೋರ್ ವೆಲ್ ಪೈಪ್ ಅಸೋಸಿಯೇಷನ್ ನಲ್ಲಿ ಕೆಲಸ ಮಾಡುತ್ತಿದ್ದ ಜೋಸೆಫ್‍ಗೆ ಗಂಗಾ ಬೋರ್ ವೆಲ್ಸ್ ಮಾಲೀಕ ಪುಟ್ಟ ಮಾದೇಗೌಡ ಮತ್ತು ಗ್ಯಾಂಗ್ ನಿಂದ ಹಲ್ಲೆ ನಡೆದಿದೆ.

ಗಂಗಾ ಬೋರ್ ವೆಲ್ಸ್ ನವರು ಪಿವಿಸಿ ಪೈಪ್ ಖರೀದಿ ಮಾಡಿ ಹಣ ಕೊಟ್ಟಿರಲಿಲ್ಲ ಹಣ ನೀಡುವಂತೆ ಜೋಸೆಫ್ ಗಂಗಾ ಬೋರ್ ವೆಲ್ಸ್ ನವರ ಬಳಿ ಹೋಗಿ ಕೇಳಿದಾಗ ರೂಂನಲ್ಲಿ ಹಾಕಿ ಹಲ್ಲೆ ನಡೆಸಿದ್ದಾರೆ. ಗಂಗಾ ಬೋರ್ ವೆಲ್ಸ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೋರ್ ವೆಲ್ಸ್ ಅಸೋಸಿಯೇಷನ್ ಒತ್ತಾಯಿಸಿದೆ. ಘಟನೆ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Money Assault ಬೋರ್ ವೆಲ್ ಅಸೋಸಿಯೇಷನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ