ಮುಖಕ್ಕೆ ಕಾರದ ಪುಡಿ ಎರಚಿ ಸರಗಳವು

one more chain snatch incident at bengaluru!

20-07-2018

ಬೆಂಗಳೂರು: ಹೆಸರಘಟ್ಟದ ದೊಡ್ಡಬ್ಯಾಲಕೆರೆ ಬಳಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಯನ್ನು ಅಡ್ಡಗಟ್ಟಿದ ಬೈಕ್‍ನಲ್ಲಿ ಬಂದ ಖದೀಮರು ಮುಖಕ್ಕೆ ಕಾರದ ಪುಡಿ ಚಿಮುಕಿಸಿ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾರೆ. ದೊಡ್ಡಬ್ಯಾಲಕೆರೆಯ ರಾಮಮೂರ್ತಿ ಗಾರ್ಡನ್‍ನ ಮುನಿಯಮ್ಮ (68) ಅವರು ನಿನ್ನೆ ಸಂಜೆ  ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಖದೀಮರು ಅಡ್ಡಗಟ್ಟಿ ಕಾರದ ಪುಡಿ ಚಿಮುಕಿಸಿ ಕರವಸ್ತ್ರ ಮೂಗಿಗೆ ಹಿಡಿದು ಕೊರಳಿನಲ್ಲಿದ್ದ ಸುಮಾರು 65 ಗ್ರಾಂ.ಚಿನ್ನದ ಸರ ಕಿತ್ತು ಕ್ಷಣಾರ್ಧದಲ್ಲಿ  ಪರಾರಿಯಾಗಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Chili powder Robbery ಚಿನ್ನದ ಸರ ಬೈಕ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ