ಹೆಂಡತಿ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಗಂಡ

A man was killed his own wife and surrendered to the police

20-07-2018

ಬೆಂಗಳೂರು: ರಾಜಗೋಪಾಲ ನಗರದ ರಾಜೇಶ್ವರಿನಗರದಲ್ಲಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ ಪತ್ನಿ ಸೌಮ್ಯಳನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಜಗದೀಶ್ ರಾಜಗೋಪಾಲನಗರ ಪೊಲೀಸರಿಗೆ ಶರಣಾಗಿದ್ದಾನೆ. ರಾಜಗೋಪಾಲ ನಗರದ ರಾಜೇಶ್ವರಿ ನಗರದಲ್ಲಿ ವಾಸಿಸುತ್ತಿದ್ದ ಪತ್ನಿ ಸೌಮ್ಯ (29)ಳನ್ನು ಕತ್ತು ಹಿಸುಕಿ ಕೊಲೆಗೈದಿರುವ ಪತಿ ಜಗದೀಶ್(45) ಪೊಲೀಸರಿಗೆ ಹೆದರಿ ಶರಣಾಗಿದ್ದು, ಆತನನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಚಾಮರಾಜನಗರದ ಪಿರಿಯಾಪಟ್ಟಣ ಮೂಲದ ಜಗದೀಶ್, ಮೊದಲ ಪತ್ನಿಯ ಅಕಾಲಿಕ ನಿಧನದ ನಂತರ ತನ್ನದೇ ಗ್ರಾಮದ ಸೌಮ್ಯಳನ್ನು 2ನೇ ವಿವಾಹವಾಗಿದ್ದು, ರಾಜೇಶ್ವರಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಕಾರ್ಖಾನೆಯೊಂದರಲ್ಲಿ ಪ್ಯಾಕೇಜಿಂಗ್ ಕೆಲಸಕ್ಕೆ ಜಗದೀಶ್ ಹೋಗುತ್ತಿದ್ದರೆ, ಸೌಮ್ಯ ಗಾರ್ಮೆಂಟ್ಸ್ಗೆ ಕೆಲಸಕ್ಕೆ ಹೋಗುತ್ತಿದ್ದಳು, ದಂಪತಿಗಿದ್ದ 10 ವರ್ಷದ ಮಗನನ್ನು ಪಿರಿಯಾಪಟ್ಟಣಕ್ಕೆ ಕಳುಹಿಸಲಾಗಿತ್ತು.

ಸೌಮ್ಯ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ನಿನ್ನೆ ರಾತ್ರಿ 9ರ ವೇಳೆ ಇದೇ ವಿಚರವಾಗಿ ಇವರಿಬ್ಬರ ನಡುವೆ ಮತ್ತೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಜಗದೀಶ್, ಸೌಮ್ಯಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಹೆದರಿ ರಾತ್ರಿ 12ರ ವೇಳೆ ರಾಜಗೋಪಾಲ ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder illegal relationship ಅನೈತಿಕ ಕಾರ್ಖಾನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ