ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ!

Mixed response to indefinite lorry strike!

20-07-2018

ಬೆಂಗಳೂರು: ಟೋಲ್ ಮುಕ್ತ ಭಾರತ ಮಾಡುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟ ಶುಕ್ರವಾರದಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಷ್ಕರದಿಂದಾಗಿ ನಗರದ ಪ್ರಮುಖ ಮಾರುಕಟ್ಟೆಗಳು ಸೇರಿ ಇತರ ಮಾರುಕಟ್ಟೆಗಳು, ವ್ಯಾಪಾರಿ ಕೇಂದ್ರಗಳು ವಾಣಿಜ್ಯ ಮಳಿಗೆಗಳ ಬಳಿ ಲಾರಿ ಸಂಚಾರ ಕಡಿಮೆಯಾಗಿವೆ ಅಲ್ಲದೇ ರಸ್ತೆಗಳಲ್ಲಿ ಲಾರಿ ಸಂಚಾರ ವಿರಳವಾಗಿದೆ. ಟೋಲ್ ಮುಕ್ತ ಭಾರತವಾಗಬೇಕು, ಡೀಸೆಲ್ ಮೇಲಿನ ಸುಂಕ ಕಡಿಮೆ ಮಾಡುವುದು, ಪ್ರತಿವರ್ಷ ಅವೈಜ್ಞಾನಿಕವಾಗಿ ಹೆಚ್ಚಳ ಮಾಡುತ್ತಿರುವ ವಿಮಾ ದರವನ್ನು ಕಡಿಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ನೇತೃತ್ವದಲ್ಲಿ ಮುಷ್ಕರ ನಡೆಸುತ್ತಿದೆ.

ಆದರೆ ಮುಷ್ಕರಕ್ಕೆ ಚೆನ್ನಾರೆಡ್ಡಿ ನೇತೃತ್ವದ ಲಾರಿ ಮಾಲೀಕರ ಸಂಘ ಬೆಂಬಲ ನೀಡಿಲ್ಲ. ಹೀಗಾಗಿ ಎಂದಿನಂತೆ ಲಾರಿಗಳು ಕಾರ್ಯನಿರ್ವಹಿಸುತ್ತಿವೆ ಇದರಿಂದಾಗಿ ಲಾರಿ ಮಾಲೀಕರ ಸಂಘಟನೆಗಳ ಭಿನ್ನಾಭಿಪ್ರಾಯ ಮತ್ತು ಬಣದ ಗುಂಪಿನಿಂದ ಲಾರಿ ಮುಷ್ಕರದ ಮೇಲೆ ಪ್ರತಿಕೂಲ ಪರಿಣಾಮ ಬೀರಿಲ್ಲ. ಶನಿವಾರದಿಂದ ಲಾರಿ ಮುಷ್ಕರ ಮತ್ತಷ್ಟು ಹೆಚ್ಚಾಗಲಿದೆ. ನಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸುವವರೆಗೂ ಮುಷ್ಕರಮ ಮುಂದುವರಿಯಲಿದೆ ಎಂದು ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.

ಪ್ರತಿ ವರ್ಷ ಲಾರಿ ಮಾಲೀಕರು ಟೋಲ್‍ಗಾಗಿಯೇ 17ಸಾವಿರ ಕೋಟಿ ರೂಪಾಯಿ ಸಂಗ್ರಹ ಮಾಡುತ್ತಿದೆ. ಟೋಲ್‍ಗಳಲ್ಲಿ ಲಾರಿಗಳು ನಿಲ್ಲುತ್ತಿರುವುದರಿಂದ ಸಮಯ ವ್ಯರ್ಥವಾಗಲಿದೆ ಇದನ್ನು ತಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ದೇಶಾದ್ಯಂತ ಮುಷ್ಕರ: ಈ ನಡುವೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡುವಂತೆ ಆಗ್ರಹಿಸಿ, ದೇಶದಾದ್ಯಂತ ಲಾರಿ ಮಾಲೀಕರ ಸಂಘಟನೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಅಖಿಲ ಭಾರತ ಮೋಟಾರು ಸಾರಿಗೆ ನಿಗಮ ಸರ್ಕಾರ ಜೊತೆ ಗುರುವಾರ ತಡ ರಾತ್ರಿ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಇಂದಿನಿಂದ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಲಾರಿ ಮುಷ್ಕರ ಪ್ರಾರಂಭವಾಗಿದೆ.

ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ 3 ತಿಂಗಳು ಸಮಯಾವಕಾಶ ಕೇಳಿ ಹಲವು ತಿಂಗಳು ಕಳೆದಿದ್ದರೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮುಷ್ಕರ ತಡೆಹಿಡಿಯಲಾಗಿದೆ ಎಂದು ಎಐಎಂಟಿಸಿ ಅಧ್ಯಕ್ಷ ಬಾಲ್ ಸಿಂಗ್ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ