ವಿಜಯಪುರ: ಎಸಿ ಕಚೇರಿ ಸಿಬ್ಬಂದಿಗೆ ಸಾರ್ವಜನಿಕರ ಹಿಡಿಶಾಪ

They not come at in time...continuous leave..AC office vijayapura

20-07-2018

ವಿಜಯಪುರ: ಜಿಲ್ಲೆಯ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಬಯೋಮೆಟ್ರಿಕ್ ಮೆಷಿನ್ ಕೈಕೊಟ್ಟಿದ್ದು, ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಜಿಲ್ಲಾ ಪಂಚಾಯತಿ ಕಚೇರಿ ಬಳಿ ಇರುವ ವಿಜಯಪುರ ಉಪವಿಭಾಗಾಧಿಕಾರಿ ಕಚೇರಿಯ ಸಿಬ್ಬಂದಿ ತಮ್ಮಿಷ್ಟ ಬಂದಂತೆ ವರ್ತಿಸುತ್ತಿರುವುದು ಕಂಡು ಬಂದಿದೆ.

ದಿನಾಂಕ ಮತ್ತು ಸಮಯವನ್ನು ತಪ್ಪಾಗಿ ತೋರಿಸುತ್ತಿರುವ ಬಯೋಮೆಟ್ರಿಕ್ ಮೆಷಿನ್ ಸಮಸ್ಯೆಯಿಂದ, ಸಮಯ 11:30 ಆದರೂ ಕಚೇರಿಗೆ ಆಗಮಿಸದಿರುವುದು ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿದ್ದಾರೆ. ಬಯೊಮೆಟ್ರಿಕ್ ಮೆಷಿನ್ ಸಮಸ್ಯೆ ಎದುರಾಗಿದ್ದ ನಂತರದಲ್ಲಿ ಕಚೇರಿಗೆ ಸರಿಯಾದ ಸಮಯಕ್ಕೆ ಸಿಬ್ಬಂದಿ ಬರದೆ ಕಚೇರಿ ಟೇಬಲ್ ಕುರ್ಚಿಗಳು ಖಾಲಿ ಖಾಲಿ.

ಅದಲ್ಲದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ವಾರಾನುಗಟ್ಟಲೆ ಕೆಲಸಕ್ಕೆ ಹಾಜರಾಗದ ಸಿಬ್ಬಂದಿಗಳಿಂದ ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ. ತಮ್ಮ ಕೆಲಸಗಳಿಗಾಗಿ ತಿಂಗಳುಗಟ್ಟಲೇ ಅಲೆದಾಡುವಂತಾಗಿದೆ ಎಂದು ಸಾರ್ವಜನಿಕರು ಎಸಿ ಕಚೇರಿ ಸಿಬ್ಬಂದಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ