ಸಾಲಮನ್ನಾ ನಂತರವೂ ಈವರೆಗೆ ಬೀದರ್ ನಲ್ಲಿ 4ರೈತರ ಆತ್ಮಹತ್ಯೆ

Total 4 farmers committed suicide at bidar!

20-07-2018

ಬೀದರ್: ಸಾಲ ಬಾಧೆ ತಾಳಲಾರದೆ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕಿನಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಿದ ನಂತರ ನಡೆದ ನಾಲ್ಕನೇ ಆತ್ಮಹತ್ಯೆ ಇದಾಗಿದೆ. ತಾಲ್ಲೂಕಿನ ಬಾಲಾಜಿ ಎಂಬ ರೈತ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಗತಿ ಕೃಷ್ಣಾ, ಹಾಗೂ ಖಾಸಗಿಯಾಗಿ ಸಾಕಷ್ಟು ಸಾಲಮಾಡಿಕೊಂಡಿದ್ದ ರೈತ, ಸಾಲವನ್ನೂ ತೀರಿಸಲಾಗದೆ, ಇತ್ತ ಬೆಳೆಯು ಸರಿಯಾಗಿ ಬರದಿದ್ದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಔರಾದ್ ತಾಲ್ಲೂಕಿನ ಕಾಶೆಂಪೂರ್ ಗ್ರಾಮದ ರಾಮನಾಥ್ ಶೆಟ್ಟಿ ಮೇಕರೆ, ಬಸವ ಕಲ್ಯಾಣದ ನಿಡುಗೊಡಿ ಗ್ರಾಮದ ಭೀಮಣ್ಣ ಕಾಳೆಖಂಡು ಮತ್ತೊಬ್ಬ ಬಸವ ಕಲ್ಯಾಣದ ಹಣಮಂತವಾಡಿ ರೈತ ಮಲ್ಲಪ್ಪ ಮದಪೆ, ಆತ್ಮಹತ್ಯೆ ಮಾಡಿಕೊಂಡ ರೈತರು.

ಆದರೆ, ಈವರೆಗೂ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿಲ್ಲ. ತಮ್ಮ ಕ್ಷೇತ್ರದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಇತ್ತ ಶಾಸಕ ಬಿ.ನಾರಾಯಣ್ ರಾವ್, ರಾಜಸ್ಥಾನ ಪ್ರವಾಸದಲ್ಲಿದ್ದಾರೆ. ಜನಪ್ರತಿನಿಧಿಗಳ ಈ ಕಾರ್ಯವೈಖರಿಗೆ ಜಿಲ್ಲೆಯ ಜನತೆ ಫುಲ್ ಗರಂ ಆಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Farmers suicide ಜನಪ್ರತಿನಿಧಿ ಕಾರ್ಯವೈಖರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ