ಬಸ್ ಚಾಲಕ-ನಿರ್ವಾಹಕನ ಮೇಲೆ ಪೊಲೀಸ್ ಪೇದೆ ಹಲ್ಲೆ!

police constable assault on bus driver and conductor!

20-07-2018

ವಿಜಯಪುರ: ಬಸ್ ಚಾಲಕ ಹಾಗೂ ನಿರ್ವಾಹಕನ‌ ಮೇಲೆ ಪೊಲೀಸ್ ಪೇದೆ ದರ್ಪ ತೋರಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.  ಇಬ್ಬರ ಮೇಲೆಯೂ ಮನಬಂದಂತೆ ಪೊಲೀಸ್ ಪೇದೆ ಹಲ್ಲೆ ಮಾಡಿದ್ದಾನೆ. ಇಂಡಿ ಪಟ್ಟಣದ ಬಜಾರಾ ಡಾಬಾ ಬಳಿ ಘಟನೆ ನಡೆದಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪೇದೆ ವಿಶ್ವನಾಥ್ ಭಜಂತ್ರಿ ಈ ರೀತಿಯ ಗೂಂಡಾ ವರ್ತನೆ ತೋರಿದ್ದಾರೆ. ಬಸ್ ಚಾಲಕ ಮಹದೇವ್, ನಿರ್ವಾಹಕ ಸತ್ಯನಾರಾಯಾಣ ಎಂಬುವರರಿಗೆ ಬಸ್ ನಲ್ಲಿಯೇ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ. ಬಸ್ ವಾರಂಟ್ ವಿಷಯದಲ್ಲಿ ತಗಾದೆ ಹಿನ್ನೆಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

police constable Harassment ಬಸ್ ಚಾಲಕ ನಿರ್ವಾಹಕನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ