ಅಣ್ಣ-ತಂಗಿಯನ್ನು ಬೆದರಿಸಿ ಚಿನ್ನಾಭರಣ ದರೋಡೆ

A Robbery gang threatened to brother-sister and robbed

19-07-2018

ಬೆಂಗಳೂರು: ನಗರದ ಹೊರ ವರ್ತುಲ ರಸ್ತೆಯ ಲಗ್ಗೆರೆ ಬಸ್‍ನಿಲ್ದಾಣದಲ್ಲಿ ಇಂದು ಮುಂಜಾನೆ  ಊರಿಗೆ ಹೋಗಲು ಬಸ್ ಗಾಗಿ ಕಾಯುತ್ತಾ ನಿಂತಿದ್ದ ಅಣ್ಣ-ತಂಗಿಯನ್ನು ಮೂವರು ದುಷ್ಕರ್ಮಿಗಳು ಬೆದರಿಸಿ ಚಿನ್ನದ ಸರ, ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಲಗ್ಗೆರೆಯ ಹೇಮಾ ಹಾಗೂ ಅವರ ಅಣ್ಣ ಪ್ರಸನ್ನ ಅವರು ಮುಂಜಾನೆ 5.30ರ ವೇಳೆ ರಿಂಗ್‍ ರಸ್ತೆಯ ಲಗ್ಗೆರೆ ಬಸ್ ನಿಲ್ದಾಣದ ಬಳಿ ಊರಿಗೆ ಹೋಗಲು ಬಸ್‍ಗಾಗಿ ಕಾಯುತ್ತ ನಿಂತಿದ್ದರು.

ಈ ವೇಳೆ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಸಿ ಪ್ರಸನ್ನ ಅವರ ಬಳಿ ಇದ್ದ ಮೊಬೈಲ್ ಹಾಗೂ ಹೇಮಾ ಅವರ ಕತ್ತಿನಲ್ಲಿದ್ದ 33 ಗ್ರಾಂ.ತೂಕದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಸನ್ನ ಅವರು ನೀಡಿರುರ ದೂರು ದಾಖಲಿಸಿರುವ ನಂದಿನಿ ಲೇಔಟ್ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Robbery sister-brother ಬಸ್‍ನಿಲ್ದಾಣ ಮೊಬೈಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ