ಸೂಟ್ ಕೇಸ್ ಖರೀದಿಯಲ್ಲಿ‌ ಅವ್ಯವಹಾರ ನಡೆದಿಲ್ಲ: ಎಸ್.ಮೂರ್ತಿ

No illegal had happened in suitcase buying : vidhana sabha Secretary

19-07-2018

ಬೆಂಗಳೂರು: ಶಾಸಕರಿಗೆ ನೀಡಬೇಕಿದ್ದ  ಸೂಟ್ ಕೇಸ್ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಸ್ಪಷ್ಟಪಡಿಸಿದ್ದಾರೆ. ಹೊಸದಾಗಿ ಶಾಸಕರು ಸದನಕ್ಕೆ ಬಂದಿದ್ದಾರೆ, ಸಂಪ್ರದಾಯದಂತೆ ಅವರಿಗೆ ಸೂಟ್ ಕೇಸ್ ನೀಡಬೇಕು. ಅಗತ್ಯ ದಾಖಲೆ, ಸೂಚನಾ ಪತ್ರ ಒಳಗೊಂಡ ಸೂಟ್ ಕೇಸ್ ನೀಡಬೇಕು. ಹಾಗಾಗಿ, ಸೂಟ್ ಕೇಸ್ ತರಿಸಲಾಗಿತ್ತು ಎಂದು ಮೂರ್ತಿ ತಿಳಿಸಿದರು.

ಸೂಟ್ ಕೇಸ್ ನೀಡುವವರು ಪೂರೈಸಿದ್ದರು. ನಾವು ಯಾವುದೇ ಸೂಟ್ ಕೇಸ್ ಖರೀದಿ ಮಾಡಿಲ್ಲ. ಸೂಟ್ ಕೇಸ್ ಗೆ ಪೇಮೆಂಟ್ ಮಾಡಿಲ್ಲ. ಇಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಅವರು ಹೇಳಿದರು. ಅಧಿವೇಶನದೊಳಗೆ ಸೂಟ್ ಕೇಸ್ ಸದಸ್ಯರಿಗೆ ನೀಡಬೇಕಿತ್ತು. ಆದರೆ, ಸಮಯಾವಕಾಶ ಆಗ ಸಿಗಲಿಲ್ಲ. ಮತ್ತೆ ಸೂಟ್ ಕೇಸ್ ಕೊಡೋಣ ಅಂತ ಅಂದುಕೊಂಡಿದ್ದೆವು. ಆದರೆ ಅಧಿವೇಶನ ಮುಗಿದ ಮೇಲೆ ಬೇಡ ಅಂತ ಸ್ಪೀಕರ್ ಹೇಳಿದ್ದಾರೆ. ಹೀಗಾಗಿ, ಸೂಟ್ ಕೇಸ್ ವಾಪಸ್ ಮಾಡಲಾಗಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವುದೆಲ್ಲ ಸುಳ್ಳು ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಸ್ಪಷ್ಟಪಡಿಸಿದರು.


ಸಂಬಂಧಿತ ಟ್ಯಾಗ್ಗಳು

suitcase vidhana sabha Secret ಪೇಮೆಂಟ್ ಸ್ಪೀಕರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ