ಶಿರೂರು ಶ್ರೀಗಳದು ಸಹಜ ಸಾವು: ಪೇಜಾವರ ಶ್ರೀ

Shiroor shri

19-07-2018

ಬೆಂಗಳೂರು: ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳ ಅಗಲಿಕೆ ನೋವು ತಂದಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಲಕ್ಷ್ಮೀವರ ತೀರ್ಥ ಶ್ರೀಗಳ ನಿಧನದ ಕುರಿತು ಹುಬ್ಬಳ್ಳಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, ವಿಷಪ್ರಾಶನದ ಬಗ್ಗೆ ಮಾಹಿತಿಯಿಲ್ಲ.  ಅವರು ಎಲ್ಲಿ ಆಹಾರ ಸ್ವೀಕಾರ ಮಾಡಿದ್ದಾರೋ ಏನೋ ಗೊತ್ತಿಲ್ಲ. ಲಿವರ್, ಕಿಡ್ನಿ ವಿಫಲವಾಗಿದ್ದವು ಎಂದು ಮಾಹಿತಿ ಬಂದಿದೆ. ‘ಅವರಿಗೆ ವಿಷಪ್ರಾಶನ ಯಾರು ಮಾಡ್ತಾರೆ..? ಶಿರೂರು ಸ್ವಾಮೀಜಿಗಳಿಗೆ ವಿಷ ನೀಡೋ ಪ್ರಮೇಯವೇ ಇಲ್ಲ. ಸ್ವಾಮೀಜಿಗಳು ಯಾರು ಕೊಲೆ ಮಾಡುವುದಿಲ್ಲ. ಅವರನ್ನು ಕೊಲೆ ಮಾಡಿ ಪಟ್ಟಕ್ಕೆ ಏರುವ ಉದ್ದೇಶ ಯಾರಿಗೂ ಇಲ್ಲ. ಕಾರಣ ಇಲ್ಲದೆ ಯಾರ ಮೇಲೂ ಆರೋಪ ಮಾಡಬಾರದು. ಅವರದು ಕೊಲೆ ಎಂಬುದು ಶುದ್ಧ ಸುಳ್ಳು. ಅವರದು ಒಂದು ಸಹಜ ಸಾವು. ಅವರ ಸಾವಿನ ಹಿಂದೆ ಸಂಶಯ ಮಾಡುವುದು ಸರಿಯಲ್ಲ. ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದರು ಎಂದರು.

ಇಂದು ರಾತ್ರಿ ಉಡುಪಿಗೆ ಹೋಗುತ್ತೇನೆ, ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವ ಕುರಿತು ಅಲ್ಲೇ ತೀರ್ಮಾನಿಸುತ್ತೇನೆ ಎಂದು ಕೂಡ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

pejavara shree Lakshmivara Tirtha ಸಂಸ್ಕಾರ ಅನಾರೋಗ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ