ಮೂಢನಂಬಿಕೆ ಬದಿಗೊತ್ತಿ ತಲಕಾವೇರಿಗೆ ನಾಳೆ ಸಿಎಂ ಭೇಟಿ!

Cm Kumaraswamy to visit talakaveri tomorrow!

19-07-2018

ಮಡಿಕೇರಿ: ನಾಡಿನ ಜೀವ ನದಿ ಕಾವೇರಿ ಜನ್ಮ ಸ್ಥಳ ಮಡಿಕೇರಿಯ ತಲಕಾವೇರಿಗೆ ಭೇಟಿ ಕೊಟ್ಟರೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಅನ್ನೊ ಮೂಢನಂಬಿಕೆ ನಡುವೆ, ಸುಮಾರು 19ವರ್ಷಗಳ ಬಳಿಕ ನಾಳೆ ತಲಕಾವೇರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭೇಟಿ ನೀಡುತ್ತಿದ್ದಾರೆ. ಮೂಢ ನಂಬಿಕೆ ನಡುವೆ ಕುತೂಹಲ ಮೂಡಿಸಿದೆ ಸಿಎಂ ಕುಮಾರಸ್ವಾಮಿಯವರ ತಲಕಾವೇರಿ ಭೇಟಿ. ಈ ಹಿಂದೆ ತಲಕಾವೇರಿಗೆ ಭೇಟಿ ನೀಡಿದ ಬಳಿಕ ಜೆ.ಹೆಚ್.ಪಟೇಲ್ ಅವರು ಅಧಿಕಾರ ಕಳೆದುಕೊಂಡಿದ್ದರು ಎಂದು ಹೇಳಲಾಗುತ್ತದೆ. ನಂತರದಲ್ಲಿ ಇದೇ ಭಯಕ್ಕೆ ತಲಕಾವೇರಿಗೆ ಭೇಟಿ ನೀಡಲು ಮುಖ್ಯಮಂತ್ರಿಗಳು ಹಿಂದೇಟು ಹಾಕುತ್ತಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೂಡ ಇದೇ ಕಾರಣಕ್ಕೆ ದೂರ ಉಳಿದಿದ್ದರು ಎಂಬ ಮಾತುಗಳು ಇವೆ. ಜೆ.ಹೆಚ್.ಪಟೇಲ್ ಬಳಿಕ ಯಾವೊಬ್ಬ ಮುಖ್ಯಮಂತ್ರಿಯೂ ತಲಕಾವೇರಿಗೆ ಬಂದಿರಲಿಲ್ಲ. ಇದೀಗ 19 ವರ್ಷಗಳ ಬಳಿಕ ನಾಳೆ ತಲಕಾವೇರಿಗೆ ಸಿಎಂ ಕುಮಾರಸ್ವಾಮಿ ಭೇಟಿ ನೀಡುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲೂ ಭಾರೀ ಚರ್ಚೆ ನಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ