ಖದರ್ ಕಳೆದುಕೊಳ್ಳುತ್ತಿರುವ ಡಿಕೆಶಿ!

D.K.Shivakumar and H.D.Kumaraswamy

19-07-2018

ಸಮ್ಮಿಶ್ರ ಸರ್ಕಾರ ರಚನೆಯಾಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಸರ್ಕಾರ ರಚನೆಯಾದ ನಂತರ ಮಂತ್ರಿ ಪದವಿಯನ್ನು ಗಿಟ್ಟಿಸಿಕೊಂಡು, ಒಳ್ಳೆಯ ಖಾತೆಯನ್ನು ಪಡೆದುಕೊಂಡು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದ್ದ ಸಂದರ್ಭದಲ್ಲಿ ವಿಶೇಷವಾಗಿ ಹೆಚ್.ಡಿ.ಕುಮಾರಸ್ವಾಮಿಯವರ ಬೆಂಬಲಕ್ಕೆ ನಿಂತು, ಕಾಂಗ್ರೆಸ್ ಪಕ್ಷದವರು ಮುಖ್ಯಮಂತ್ರಿಗಳನ್ನು ಟೀಕಿಸಿದಾಗ, ಪ್ರಶ್ನಿಸಿದಾಗ ಅವರನ್ನು ಬೆದರಿಸುತ್ತಾ ಕುಮಾರಸ್ವಾಮಿಯವರ ರಕ್ಷಣೆಗೆ ನಾವಿದ್ದೇವೆಂದು ಕಂಡುಬರುತ್ತಿರುವ ಡಿಕೆಶಿ ಕಾಂಗ್ರೆಸ್‍ ನವರಿಗೆ ಮುಜುಗರ ಉಂಟುಮಾಡಿದ್ದಾರೆ. ಇಷ್ಟು ವರ್ಷಗಳ ಕಾಲ ಹಾವು, ಮುಂಗುಸಿಯಂತೆ ಇದ್ದ ಡಿಕೆಶಿ ಮತ್ತು ದೇವೇಗೌಡರ ಕುಟುಂಬದ ಮಧ್ಯೆ ಈಗ ಸಂಬಂಧ ಹೇಗಿದೆಯೋ ಗೊತ್ತಿಲ್ಲ, ಆದರೂ ಅಧಿಕಾರ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಶಿವಕುಮಾರ್ ಬಗ್ಗೆ ಹೆಚ್ಡಿಕೆಗೆ ಒಂದಷ್ಟು ಪ್ರೀತಿಯಿದ್ದರೂ ಯಾವ ಕಾಲಕ್ಕೂ ದೇವೇಗೌಡರ ಕುಟುಂಬದ ಇತರರು ಡಿಕೆಶಿಯನ್ನು ಒಪ್ಪಿಕೊಳ್ಳುವುದಿಲ್ಲ, ಹಾಗೇ ಅನುಮಾನದಿಂದ ನೋಡುವುದನ್ನು ಬಿಡುವುದಿಲ್ಲ ಎನ್ನುತ್ತಾರೆ ಅನೇಕ ಕಾಂಗ್ರೆಸ್ಸಿಗರು. ಡಿಕೆ ಮತ್ತು ಹೆಚ್ಡಿಕೆ ನಡುವಿನ ವಿಪರೀತ ದೋಸ್ತಿಯಿಂದ ಲಾಭವಾಗುವುದು ಜೆಡಿಎಸ್‍ಗೆ ಮತ್ತು ನಷ್ಟವಾಗುವುದು ವೈಯಕ್ತಿಕವಾಗಿ ಡಿಕೆಶಿಗೆ ಮಾತ್ರ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಇಷ್ಟು ವರ್ಷಗಳ ಕಾಲ ಸಾತನೂರಿನಲ್ಲಿ ಜೆಡಿಎಸ್ ವಿರುದ್ಧ ರಾಜಕೀಯ ಮಾಡಿಕೊಂಡು ಪಾರುಪತ್ಯ ನಡೆಸಿಕೊಂಡು ಬಂದಿರುವ ಡಿಕೆಶಿ ಮತ್ತು ಡಿಕೆ ಸುರೇಶ್ ಜೆಡಿಎಸ್ ಅನ್ನು ಅನಾಮತ್ತಾಗಿ ರಾಮನಗರ ಜಿಲ್ಲೆಯಾದ್ಯಂತ ಬೆಳೆಸಲು ಪರೋಕ್ಷವಾಗಿ ಈ ಮೂಲಕ ಕಾರಣರಾಗಿಬಿಡುತ್ತಾರೆ. ಎದೆಯುಬ್ಬಿಸಿ ನಿಂತಿದ್ದ ಡಿಕೆಶಿ, ಹೆಚ್‍ಡಿಕೆ ಎದುರು ದುರ್ಬಲ ಹಿಂಬಾಲಕನಂತೆ ವರ್ತಿಸುತ್ತಿರುವುದು ಸಾತನೂರಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಏನೇನೂ ಸರಿಕಾಣಿಸುತ್ತಿಲ್ಲ. ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಡಿಕೆಶಿ ಈ ರೀತಿ ವರ್ತಿಸುತ್ತಿರುವುದಲ್ಲದೇ ಕಾಂಗ್ರೆಸ್ ಹಿತದಿಂದಲ್ಲ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಿದ್ದಾರೆ. ಹೀಗೆ ಮುಂದುವರೆದರೆ ಈಗಾಗಲೇ ಖದರ್ ಕಳೆದುಕೊಂಡಿರುವ ಡಿಕೆಶಿ ಮುಂದೆ ಕಾಂಗ್ರೆಸ್‍ನಲ್ಲೂ ಮತ್ತು ಜೆಡಿಎಸ್ ವಿರುದ್ಧವೂ ರಾಜಕೀಯವಾಗಿ ದುರ್ಬಲರಾಗಿಬಿಟ್ಟರೆ ಆಶ್ಚರ್ಯವೇನಿಲ್ಲ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಜೈ ಡಿಕೆಶಿ
  • ಸೂರ್ಯ
  • ಕೂಲಿ
Howdu DK boss nimmannu hupayogisikondu kelsa madutiddare hecchara
  • Karthik gowda
  • Law student
ದಯವಿಟ್ಟು ಇಂತಹ ಪ್ರಶ್ನೆ ಗಳನ್ನು ಕೇಳಬೇಡಿ... 2 ಗಜಗಳು ಒಂದಾಗಿವೆ... ನಮ್ಮ ರಾಜ್ಯ ಉದ್ದಾರ ಹಾಗೋ ಟೈಂ ಬಂದಿದೆ... ಅದಕ್ಕೆ ಕಲ್ಲು ಹಾಕಬೇಡಿ
  • Lokesh
  • Sales
ಹುಲಿ ಯಾವತ್ತೂ ಹುಲೀನೆ ನರಿ ಆಗೋಕೆ ಛಾನ್ಸ್ ಇಲ್ಲ. ಇದೆಲ್ಲ ನಿಮ್ಮಲ್ಲಿರೊ ಭ್ರಮೆ ಅಷ್ಟೆ..
  • ಸುರೇಂದ್ರ ಶೆಟ್ಟಿ
  • ಏಜೆಂಟ್
Yahudhe karanakku dkshi kadhar kadime agalla
  • DhaneGowda
  • Network