ಎಲ್ಲಕ್ಕಿಂತ ನಮ್ಮ ಕರ್ನಾಟಕವೇ ನಮಗೆ ಇಷ್ಟ: ಸುಧಾಮೂರ್ತಿ

Sudha Murthy

19-07-2018

ಬೆಂಗಳೂರು: ನಗರದ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದ ನಿರ್ಮಾಣ ಹಾಗೂ ನಿರ್ವಹಣೆ ಮಾಡಲು ಬೆಂಗಳೂರು ಮೆಟ್ರೋ ಜೊತೆ ಇನ್ಫೋಸಿಸ್ ಫೌಂಡೇಷನ್ ಒಡಂಬಡಿಕೆಗೆ ಸಹಿ‌ ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರು, ‘ನನಗೆ ರಾಜಕೀಯ ಸಭೆಗಳಲ್ಲಿ ಮಾತನಾಡಿ ಗೊತ್ತಿಲ್ಲ, ನಾನು ಹಳ್ಳಿಗಳಲ್ಲಿ ಮಾತನಾಡುವುದು ಹೆಚ್ಚು, ಆಡದೇ ಮಾಡುವವನು ರೂಢಿಯೊಳಗುತ್ತಮನು. ಹಾಗಾಗಿ ನಾವು ಮಾತನಾಡದೆ ಕೆಲಸ ಮಾಡಬೇಕು. ನಮ್ಮ ಕೆಲಸವೇ ನಮ್ಮ ಬಗ್ಗೆ ಹೇಳಬೇಕು ಎಂದರು.

‘ನಾನು ಹಲವು ದೇಶಗಳನ್ನು ಸುತ್ತಿರಬಹುದು. ಆದರೆ, ಎಲ್ಲಕ್ಕಿಂತ ನಮ್ಮ ಕರ್ನಾಟಕವೇ ನಮಗೆ ಇಷ್ಟ. ಇದು ನಮ್ಮ ತಾಯಿ ನಾಡು. ನಾವು ಈ ತಾಯಿ ನೆಲಕ್ಕೆ ಎಷ್ಟು ಸೇವೆ ಸಲ್ಲಿಸಿದರೂ ಋಣ ತೀರಿಸಲಾಗದು, ಜನ ಸೇವೆಯೇ ನಮಗೆ ಹೆಚ್ಚು ಖುಷಿ ಕೊಡುತ್ತದೆ. ಹಾಗಾಗಿ ಈ ಅಳಿಲು ಸೇವೆ ಮಾಡುತ್ತಿದ್ದೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

Sudha Murthy ‎Infosys ಫೌಂಡೇಷನ್ ಒಡಂಬಡಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ