ಯುವಕನೊಬ್ಬನ ಬರ್ಬರ ಕೊಲೆ

Murder of young man!

19-07-2018

ಬೆಂಗಳೂರು: ಬನಶಂಕರಿ ಮೆಟ್ರೋ ನಿಲ್ದಾಣದ ಎನ್‍.ಜಿ.ಆರ್ ಲೇಔಟ್ ಬಳಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದಿನಕರನ್ ಎಂಬ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಎನ್‍ಜಿಆರ್ ಲೇಔಟ್‍ನ ದಿನಕರನ್ (28)ನನ್ನು ನಾಲ್ಕೈದು ಯುವಕರ ಗುಂಪು ಮಾರಾಕಾಸ್ತ್ರಗಳೊಂದಿಗೆ ದಾಳಿ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಎನ್ ಜಿ ಆರ್ ಲೇಔಟ್ ನಲ್ಲಿ ಕೆಲ ದಿನಗಳ ಹಿಂದೆ ದಿನಕರನ್ ಯುವಕರೊಂದಿಗೆ ಜಗಳವಾಡಿಕೊಂಡಿದ್ದನು. ಏರಿಯಾದಲ್ಲಿ ಪುಂಡಾಟಿಕೆ ಮಾಡಿಕೊಂಡಿದ್ದ ಹುಡುಗರು ಗಲಾಟೆ ಮಾಡಿಕೊಂಡು ಕ್ಷುಲ್ಲಕ ದ್ವೇಷಕ್ಕೆ ಹೊಡೆದಾಡಿಕೊಂಡಿದ್ದರು. ಇದೇ ವಿಷಯವನ್ನು ಮುಂದಿಟ್ಟುಕಂಡು ದ್ವೇಷ ಸಾಧಿಸಿ ದಿನಕರನ್ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿದ ನಾಲ್ಕೈದು ಯುವಕರ ತಂಡ ಹಲ್ಲೆ ಮಾಡಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ದಿನಕರನನ್ನು ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಆತ ಬದುಕುಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಜಯನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder Rowdy ಮೆಟ್ರೋ ನಿಲ್ದಾಣ ಮಾರಕಾಸ್ತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ