ನಾನು ಸುರಕ್ಷತೆಯಿಂದ ಇದ್ದೇನೆ: ಗಜಾನನ ಸ್ವಾಮೀಜಿ

I am safe here: Gajanana Swamiji

18-07-2018

ಮಂಡ್ಯ: ಭಾರೀ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿದು ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡೇಗೌಡನ ಕೊಪ್ಪಲು ಬಳಿಯ ಪುರಾತನ ಗೌತಮ ಕ್ಷೇತ್ರ ಜಲಾವೃತಗೊಂಡಿದೆ. ಇಲ್ಲಿ ಕಳೆದ 30 ವರ್ಷಗಳಿಂದ ನೆಲೆಸಿದ್ದ ಗಜಾನನ ಸ್ವಾಮೀಜಿ ಸೇರಿದಂತೆ ಇತರರು ಪ್ರವಾಹಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ  ‘ನಾನು ಇಲ್ಲಿ ಸುರಕ್ಷತೆಯಿಂದ ಇದ್ದೇನೆ, ನನಗೆ ಯಾವ ತೊಂದರೆಯೂ ಇಲ್ಲ. ನಾನು ಸುಮಾರು 30 ವರ್ಷದಿಂದ ಇಲ್ಲಿ ಇದ್ದೇನೆ, ಈಗ ಬಂದಿರೋ ಪ್ರವಾಹದಿಂದ ನನಗಾಗಲಿ‌ ಆಶ್ರಮಕ್ಕಾಗಿ ಯಾವುದೇ ತೊಂದರೆ ಇಲ್ಲ. ನಾನು ಅಹಂಕಾರದಿಂದ ಆಶ್ರಮ ಬಿಟ್ಟು ಬರುವುದಿಲ್ಲ ಎನ್ನುತ್ತಿಲ್ಲ, ಬದಲಾಗಿ ಇಲ್ಲಿ ನಾಲ್ಕೈದು ರಾಸುಗಳಿವೆ ಮತ್ತು ಇಲ್ಲಿನ ಶಿವಲಿಂಗಕ್ಕೆ ನಿತ್ಯ ನೈವೇದ್ಯ ಮತ್ತು ನನ್ನ ನಿತ್ಯ ತಪೋ ಕೆಲಸಕ್ಕೆ ಅಡ್ಡಿಯಾಗಬಾರದೆಂದು ಬರುತ್ತಿಲ್ಲ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನಿಂದ ಯಾರಿಗಾದರು ತೊಂದರೆಯಾದರೆ ಕ್ಷಮಿಸಿ, ನಾನು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮತ್ತು ತಾಲ್ಲೂಕು ಆಡಳಿತಕ್ಕೆ ತಿಳಿಸಿದ್ದೇನೆ. ಜೊತೆಗೆ ನನಗೆ ಒಂದು ವೇಳೆ ಏನಾದರು ಹೆಚ್ಚು ಕಡಿಮೆ ಆದರೆ ನಾನೆ ಜವಾಬ್ದಾರಿ ಎಂದು ಮುಚ್ಚಳಿಕೆ ಪತ್ರ ಕೂಡ ಬರೆದು ಕೊಟ್ಟಿದ್ದೀನಿ ಎಂದರು. ಒಂದು ವೇಳೆ ನನಗೆ ಪ್ರವಾಹದಿಂದ ಅಸುರಕ್ಷತೆ ಎಂದು ಕಂಡು ಬಂದರೆ ‌ನಾನು ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

gajanana swamiji flood ಮಂಡ್ಯ-ಮೈಸೂರು ಭಾರೀ ಮಳೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ