ಮಹಾರಾಣಿ ಕಾಲೇಜಿಗೆ ಸಚಿವ ಜಿಟಿಡಿ ಭೇಟಿ

Minister G.T.Devegowda visited Maharani college today

18-07-2018

ಬೆಂಗಳೂರು: ನಗರದ ಮಹಾರಾಣಿ ಕಾಲೇಜಿಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಜೊತೆ ಸಮಸ್ಯೆಗಳ ಕುರಿತು ಸಚಿವರು ಸಮಾಲೋಚನೆ ನಡೆಸಿದರು. ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದ ಹಿನ್ನೆಲೆ, ಖುದ್ದು ಪರಿಶೀಲನೆಗಾಗಿ ಸಚಿವರೇ ಆಗಮಿಸಿದ್ದರು. ಈಗಾಗಲೇ ವಿದ್ಯಾರ್ಥಿಗಳು ತಮ್ಮ ಅಳಲು ತೊಡಿಕೊಂಡಿದ್ದು, ಈ ವಿಷಯವಾಗಿ ಪ್ರತಿಭಟನೆಯನ್ನೂ ನಡೆಸಿದ್ದರು. ಇನ್ನು ಸಮಾಲೋಚನೆ ವೇಳೆ ಮೂಲಭೂತ ಸೌಕರ್ಯ ಒದಗಿಸುವಂತೆ ಜಿಟಿಡಿಗೆ ಮನವಿ ಮಾಡಿದ್ದಾರೆ ವಿದ್ಯಾರ್ಥಿಗಳು.

ನಿರ್ವಹಣೆ ವಿಷಯವಾಗಿ ಪ್ರಾಂಶುಪಾಲರುಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಜಿಟಿಡಿ, 'ಯಾವ ಕೊರತೆಗಳು ಕಾಲೇಜಿನಲ್ಲಿವೆ ಅನ್ನೊದರ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೀರಾ? ಎಂದು ಪ್ರಾಂಶುಪಾಲರು ಹಾಗೂ ಜಂಟಿ ನಿರ್ದೇಶಕರ ವಿರುದ್ಧ ಕಿಡಿಕಾರಿದರು. ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ನಿಮಗೇ ಗೊತ್ತಿಲ್ಲ ಹೀಗಾದ್ರೆ ನಿಮ್ಮನ್ನ ಬಳ್ಳಾರಿಗೆ ಕಳುಹಿಸುತ್ತೇನೆ' ಎಂದು ಗದರಿಸಿದ್ದಾರೆ. ಇನ್ಮುಂದೆ ಕಾಲೇಜು ನಿರ್ವಹಣೆ ಸರಿಯಾಗಿ ಆಗಬೇಕು ಎಂದು ಜಂಟಿ ನಿರ್ದೇಶಕ ಉದಯಶಂಕರ್ ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

college G.T.Devegowda ನಿರ್ವಹಣೆ ತರಾಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ