6ಮಂದಿ ರೋಡ್ ರೋಮಿಯೋಗಳ ಬಂಧನ

police arrested 6 road romeos at hubballi

18-07-2018

ಹುಬ್ಬಳ್ಳಿ: ಜನ ನಿಬಿಡ ಪ್ರದೇಶ ಹಾಗೂ ಶಾಲಾ ಕಾಲೇಜುಗಳ ಬಳಿ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಆರು ಮಂದಿ ರೋಡ್ ರೋಮಿಯೋಗಳನ್ನು ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಹಳೇ ಬಸ್ ನಿಲ್ದಾಣ ಬಳಿ ಯುವತಿಯರನ್ನು ಹಾಗೂ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಶಿರಡಿನಗರದ ಸಂಜುಕುಮಾರ್, ತೊರವಿಹಕ್ಕಲ ಪ್ರವೀಣ್ ಜೈನ್, ಶಿರಾಜ್ ಅಹಮ್ಮದ್, ಶಂಕರ್ ತಲವಾಯಿ, ವಿವೇಕ ಗದಗಿ ಹಾಗೂ ವಿದ್ಯಾನಗರದ ಮಂಜುನಾಥ ಶಾಮನೂರು ಬಂಧಿತರು. 

ಈ ಹಿಂದೆಯೂ ಸಹ ನಗರದ ವಿವಿಧ ಕಡೆ ಚನ್ನಮ್ಮ ಪಡೆಯ ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್‍ಗಳು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಹಲವು ರೋಡ್ ರೋಮಿಯೋಗಳನ್ನು ಜೈಲಿಗೆ ಅಟ್ಟಿದ್ದರು.  ಇದೀಗ ಮತ್ತೆ ಇಂತಹ ಕಾರ್ಯಾಚರಣೆ ನಡೆಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಮಹಿಳಾ ಪೊಲೀಸ್ ಪಡೆ ಪಾತ್ರವಾಗಿದೆ.

 

 


ಸಂಬಂಧಿತ ಟ್ಯಾಗ್ಗಳು

road romeo girl students ಕಾರ್ಯಾಚರಣೆ ಪ್ರಶಂಸೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ