‘ಕಣ್ಣೀರು ತಡೆದರೆ ಆರೋಗ್ಯಕ್ಕೆ ಹಾನಿಕರ‌’ ಎಂದ ಸಚಿವ ತಮ್ಮಣ್ಣ

Petrol and diesel rates hike: KSRTC and BMTC losses increasesed

18-07-2018

ಬೆಂಗಳೂರು: ಸಿಎಂ ಕುಮಾರಸ್ವಾಮಿ ಕಣ್ಣೀರು ಹಾಕಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ‘ಕಣ್ಣೀರು ತಡೆದರೆ ಆರೋಗ್ಯಕ್ಕೆ ಹಾನಿಕರ‌, ದುಃಖ ಬಂದಾಗ ಅತ್ತು ಬಿಡಬೇಕು ತಡೆಯಬಾರದು‌. ಆನಂದ ಆದಾಗ ನಕ್ಕ ಬಿಡಬೇಕು. ಭಾವನಾತ್ಮಕವಾಗಿದ್ದಾಗ ಕಣ್ಣೀರು ಬರುತ್ತದೆ ಎಂದರು. ಸಿಎಂ ಮಾತನಾಡುವ ಸಂದರ್ಭ ಅವರ ಬಳಿ ನಾನೂ ಕುಳಿತಿದ್ದೆ. ಆ ಸಂದರ್ಭದಲ್ಲಿ ನಮಗೂ ಕಣ್ಣೀರು ಬಂದಿತ್ತು. ನಾನೂ ಸಿಎಂ ಪಕ್ಕದಲ್ಲೇ ಕುಳಿತಿದ್ದೆ. ಅವರು ಯಾರ ಮೇಲೂ ಆಪಾದನೆ ಮಾಡಿಲ್ಲ' ಎಂದು ಹೇಳಿದರು.

ಇನ್ನು ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಳದಿಂದ ಸಾರಿಗೆ ಇಲಾಖೆಯ ನಷ್ಟದ ಪ್ರಮಾಣ ಹೆಚ್ಚಾಗಿದೆ, ಹಾಗಾಗಿ ಇಲಾಖೆಗೆ ಕನಿಷ್ಟ 1,000 ಕೋಟಿ ರೂ.ಹೆಚ್ಚುವರಿ ಅನುದಾನ ಕೇಳಿದ್ದೇವೆ‌, ಜೊತೆಗೆ ಶೇಕಡಾ 20ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಎಲ್ಲ ಸಾರಿಗೆ ನಿಗಮಗಳೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ‌. ಶೀಘ್ರದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸಾರಿಗೆ ಸೆಸ್ ಸಂಗ್ರಹಿಸುವಂತೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ, ಮಹಾನಗರ ಪಾಲಿಕೆ ಈಗಾಗಲೇ ಭಿಕ್ಷುಕರ ಕರ ಸೇರಿದಂತೆ ವಿವಿಧ ಸೆಸ್ ಗಳನ್ಮು ವಿಧಿಸಲಾಗುತ್ತಿದೆ, ಅದೇ ರೀತಿ ಸಾರಿಗೆ ಸೆಸ್ ಸಂಗ್ರಹಿಸಿ ಕೊಟ್ಟರೆ ನಗರ ಸಾರಿಗೆಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.


ಸಂಬಂಧಿತ ಟ್ಯಾಗ್ಗಳು

D.C thammanna transport ಪ್ರಯಾಣ ದರ ಬಿಬಿಎಂಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ