‘ಐಫೋನ್ ಬೇಕಾದವರು ತೆಗೆದುಕೊಳ್ಳಲಿ, ಬೇಡವಾದವರು ವಾಪಸ್ ಕೊಡಲಿ’18-07-2018

ನವದೆಹಲಿ: ಸಂಸದರಿಗೆ ಐಫೋನ್ ಉಡುಗೊರೆ ‌ನೀಡಿದ ವಿಚಾರವಾಗಿ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಸಂಸದ‌ ಮುದ್ದಹನುಮೇಗೌಡರು, ‘ಐಫೋನ್ ನೀಡಿರುವುದು ದೊಡ್ಡ ವಿಚಾರವಲ್ಲ. ಬೇಕಾದವರು ತೆಗೆದುಕೊಳ್ಳಬಹುದು, ಬೇಡವಾದರು ವಾಪಸ್ ಕೊಡಲಿ. ಐಫೋನ್ ರಾಜ್ಯ ಸರ್ಕಾರದ ಹಣದಿಂದ ಕೊಟ್ಟಿದ್ದಲ್ಲ. ಸಚಿವ ಡಿ.ಕೆ ಶಿವಕುಮಾರ್ ವೈಯಕ್ತಿಕವಾಗಿ ನೀಡಿರುವುದು. ಸಣ್ಣ ವಿಚಾರಗಳನ್ನು ದೊಡ್ಡದು ಮಾಡುವುದು ಸರಿಯಲ್ಲ. ನಮ್ಮ ಮುಂದೆ ಕಾವೇರಿಯಂತ ರಾಜ್ಯದ ಪ್ರಮುಖ ಸಮಸ್ಯೆಗಳಿವೆ. ಅವುಗಳ ಕುರಿತು ಒಟ್ಟಾಗಿ ಹೋರಾಟ ಮಾಡಬೇಕು. ನಮ್ಮ ಎಲ್ಲ ಸಂಸದರು ರಾಜ್ಯದ ಒಗ್ಗಟ್ಟು ಪ್ರದರ್ಶಿಸಬೇಕು. ಸ್ಮಾರ್ಟ್ ಫೋನ್ ಗಳು ಈಗ ಅನಿವಾರ್ಯವಾಗಿವೆ ಅದನ್ನು ಕ್ಷೇತ್ರದ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Muddahanumegowda Newdelhi ಐಫೋನ್ ಡಿ.ಕೆ ಶಿವಕುಮಾರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ