ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಮಾನವೀಯ ಘಟನೆ

Inhumanity incident at the Community Health Center

18-07-2018

ಚಿತ್ರದುರ್ಗ: ಇದೇನಿದು ಆಸ್ಪತ್ರೆಯೋ ಅಥವ ಕುರಿಗಳ ದೊಡ್ಡಿಯೋ ಎಂಬಂತಾಗಿದೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ.  ಶಸ್ತ್ರ ಚಿಕಿತ್ಸೆಗೆಂದು ಬಂದಿದ್ದ ಮಹಿಳೆಯರಿಗೆ ಹಾಸಿಗೆ ಇಲ್ಲದೆ ಕುರಿಗಳಂತೆ ನೆಲದ ಮೇಲೆ ಮಲಗಿಸಿದ ಆಸ್ಪತ್ರೆ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ಶಸ್ತ್ರ ಚಿಕಿತ್ಸೆ ಕ್ಯಾಂಪ್ ವೇಳೆ ಈ ರೀತಿಯ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮೂಲಭೂತ ಸೌಕರ್ಯಗಳಿಲ್ಲದೆ ಸಮುದಾಯ ಆರೋಗ್ಯ ಕೇಂದ್ರ ಅವ್ಯವಸ್ಥೆಯ ಗೂಡಾಗಿದೆ. ಹೀಗಿದ್ದರೂ ಮಹಿಳೆಯರಿಗೆ  ಶಸ್ತ್ರ ಚಿಕಿತ್ಸೆ ಕ್ಯಾಂಪ್ ಹಾಕಿದ್ದು, ಚಿಕಿತ್ಸೆ ನಂತರ 20ಕ್ಕೂ ಹೆಚ್ಚು ಮಹಿಳೆಯರನ್ನು ನೆಲದ ಮೇಲೆ ಮಲಗಿಸಿದ್ದಾರೆ. ಕ್ಯಾಂಪ್ ಗೆ ಹೆಚ್ಚು ಮಹಿಳೆಯರು ಬಂದಿದ್ದರಿಂದ ಅವಾಂತರ ಸೃಷ್ಟಿಯಾಗಿದೆ. 30ಮಹಿಳೆಯರಿಗೆ ಮಾತ್ರ ಕ್ಯಾಂಪ್ ನಡೆಯುತ್ತಿತ್ತು, ಆದರೆ 50 ಮಹಿಳೆಯರು ಬಂದಿದ್ದು, ಯಾವುದೇ ಸೌಕರ್ಯಗಳಿಲ್ಲದ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ಅಮಾನವೀಯವಾಗಿ  ವರ್ತಿಸಿದ್ದಾರೆ. ಘಟನೆ ಕುರಿತು ಎಲ್ಲೆಡೆ ಆಕ್ರೋಶದ ಮಾತುಗಳು ಕೇಳಿಬಂದಿವೆ. ಆಸ್ಪತ್ರೆಯ ಹೊರ ಭಾಗದಲ್ಲಿ ಪುಟ್ಟ ಪುಟ್ಟ ಕಂದಮ್ಮಗಳಿಗೆ ಮರಗಳಿಗೆ ಜೋಲಿ ಕಟ್ಟಿರುವುದು ಆಸ್ಪತ್ರೆಯ ಅವ್ಯವ್ಯಸ್ಥೆಯನ್ನು ತೋರಿಸುತ್ತಿದೆ.


ಸಂಬಂಧಿತ ಟ್ಯಾಗ್ಗಳು

community hospital ಕ್ಯಾಂಪ್ ಅಮಾನವೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ