ಐಫೋನ್ ಗಿಫ್ಟ್: ಕೇಂದ್ರ ಸಚಿವ ಅನಂತಕುಮಾರ್ ಆಕ್ರೋಶ

IPhone Gift: Union Minister Ananth Kumar Outraged

18-07-2018

ಬೆಂಗಳೂರು: ರಾಜ್ಯದ ಸಂಸದರಿಗೆ ದುಬಾರಿ ಐಫೋನ್‌ ಗಿಫ್ಟ್ ವಿಚಾರದ ಕುರಿತು ಕೇಂದ್ರ ಸಚಿವ ಅನಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಫೋನ್‌ ತಿರಸ್ಕರಿಸಿ ವಾಪಸ್ ಕಳುಹಿಸಿದ್ದಾರೆ ಸಚಿವ ಅನಂತಕುಮಾರ್. ಅಲ್ಲದೆ ಐಫೋನ್‌ ವಾಪಸ್ ಕಳುಹಿಸಲು ರಾಜ್ಯದ ಎಲ್ಲಾ ಬಿಜೆಪಿ ಸಂಸದರು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಐಫೋನ್‌ ಗಿಫ್ಟ್ ವಿಚಾರವಾಗಿ ಟ್ಟೀಟ್ ಮಾಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ‘ಸೋಮವಾರವೇ ದುಬಾರಿ ಐಫೋನ್ ಹಿಂತಿರುಗಿಸಲು ಸೂಚಿಸಲಾಗಿದೆ. ರಾಜ್ಯದಲ್ಲಿ ಸಂಬಳ ಸಿಗದೆ ಪೌರ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿನನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಪ್ರವಾಹ ಪರಿಸ್ಥಿತಿ ರಾಜ್ಯದ ಜನರ ಜೀವನವನ್ನು ದುಸ್ಥಿತಿಗೆ ತಳ್ಳಿದೆ. ದುಬಾರಿ ಫೋನ್ ಗೆ ವ್ಯಯ ಮಾಡಿರುವ ಹಣವನ್ನು ರಾಜ್ಯದ ಜನರ ನೋವುಗಳಿಗೆ ಸ್ಪಂದಿಸಲು ಖರ್ಚು ಮಾಡಿ ಎಂದು ಟ್ಟೀಟ್ ಮಾಡಿದ್ದಾರೆ. ರಾಜ್ಯ ಬಿಜೆಪಿಯ ಎಲ್ಲಾ ಸಂಸದರು ಈ ಕೊಡುಗೆಯನ್ನು ತಿರಸ್ಕರಿಸಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.

 


ಸಂಬಂಧಿತ ಟ್ಯಾಗ್ಗಳು

Ananth Kumar Member of Parliament ಐಫೋನ್‌ ಪ್ರವಾಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ