ಸಾಲಮನ್ನಾ: ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಿಎಂ ಸಭೆ

cm kumaraswamy meeting with nationalised banks officers on next week

17-07-2018

ಬೆಂಗಳೂರು: ರೈತರ ಸಾಲಮನ್ನಾ ಸಂಬಂಧ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಈ ವಾರಾಂತ್ಯದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯಸ್ಥರ ಸಭೆ ಕರೆದಿದ್ದಾರೆ. 

ರೈತರ ಸುಸ್ತಿ ಮತ್ತು ಚಾಲ್ತಿ ಸಾಲ ಮನ್ನಾ ಬಗ್ಗೆ ಮಹತ್ವದ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಬ್ಯಾಂಕುಗಳಿಗೆ ರಾಜ್ಯ ಸರ್ಕಾರ ಹಂತಹಂತವಾಗಿ ಸಾಲ ಮನ್ನಾದ ಹಣವನ್ನು ತುಂಬಲು ಉದ್ದೇಶಿಸಿದೆ. ಆದರೆ ಬ್ಯಾಂಕ್‍ಗಳು ಪೂರ್ತಿ ಹಣ ಪಾವತಿ ಮಾಡದ ಹೊರತು ರೈತರಿಗೆ ಋಣಭಾರ ಪತ್ರ ನೀಡುವ ಸಾಧ್ಯತೆಗಳಿಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳ ನಿಯಮಾವಳಿಗಳಲ್ಲಿ ಸಾಲ ಪೂರ್ತಿ ಪಾವತಿಯಾಗಬೇಕಾಗಿದೆ.
 
ಇದರ ಜೊತೆಗೆ ಸರ್ಕಾರ ಪ್ರತ್ಯೇಕವಾಗಿ ಸಹಕಾರಿ ವಲಯದ ಬ್ಯಾಂಕ್‍ಗಳ ಮುಖಸ್ಥರ ಸಭೆ ಕರೆದು ಸಹಕಾರಿ ಕ್ಷೇತ್ರದಲ್ಲಿನ ರೈತರ ಸುಸ್ತಿ ಹಾಗೂ ಚಾಲ್ತಿ ಸಾಲಮನ್ನಾ ಸಂಬಂಧ ಸೂಕ್ತ ಆದೇಶ ನೀಡುವ ನಿರೀಕ್ಷೆಯಿದೆ.
 


ಸಂಬಂಧಿತ ಟ್ಯಾಗ್ಗಳು

kumaraswamy farmers ಸಹಕಾರಿ ವಲಯ ಬ್ಯಾಂಕ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ