ಮತ್ತೊಂದು ಲವ್, ಸೆಕ್ಸ್, ದೋಖಾ ಪ್ರಕರಣ!

love, sex, dhoka

17-07-2018

ಬೆಂಗಳೂರು: ಫೇಸ್‍ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿಯ ಜೊತೆ ಪ್ರೀತಿಯ ನಾಟಕವಾಡಿ ಯುವತಿಗೆ ಮೋಸ ಮಾಡಿರುವ ಯುವಕನೊಬ್ಬ  ಯಶವಂತಪುರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆಂಧ್ರದ ಕರ್ನೂಲಿನ ನಿವಾಸಿ ನರೇಶ್(22)ಬಂಧಿತ ಆರೋಪಿಯಾಗಿದ್ದಾನೆ. ಸಂತ್ರಸ್ತೆಗೂ ಈತನಿಗೂ ಫೇಸ್‍ಬುಕ್ ನಲ್ಲಿ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಬ್ಬೊರನೊಬ್ಬರು ಪ್ರೀತಿಸಲು ಆರಂಭಿಸಿದ್ದರು. ಕೆಲ ದಿನಗಳ ನಂತರ ಆತ ಮದುವೆಯಾಗುವುದಿಲ್ಲ ಎಂದು ಸಂತ್ರಸ್ತೆಗೆ ಮೋಸ ಮಾಡಿದ್ದಾನೆ. ಆದ್ದರಿಂದ ನೊಂದ ಯುವತಿ ನರೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.

ಯುವತಿಯ ದೂರು ಆಧರಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೇಸ್‍ಬುಕ್ ನಲ್ಲಿ ಪರಿಚಯವಾದ ನಂತರ ಜೆಪಿ ಪಾರ್ಕ್‍ನಲ್ಲಿ ನಾವಿಬ್ಬರು ಭೇಟಿಯಾಗಿದ್ದೇವು. ಆರೋಪಿ ನರೇಶ್ ನನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದನು. ನಂತರ ಮೈಸೂರು, ವಿಜಯವಾಡ, ಅನಂತಪುರ ಮತ್ತು ಅದೋನಿ ಮುಂತಾದ ಕಡೆ ಕರೆದುಕೊಂಡು ಸುತ್ತಾಡಿಸಿದ್ದಾನೆ. ಲಾಡ್ಜ್ ಬುಕ್ ಮಾಡಿ ನನ್ನ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಕರ್ನೂಲಿನ ತನ್ನ ಮನೆಗೆ ಕರೆದುಕೊಂಡು ಹೋಗಿ ಪೋಷಕರಿಗೆ ಪರಿಚಯ ಮಾಡಿಸಿದ್ದನು. ಅವರೂ ಸಹ ಮದುವೆ ಮಾಡುವುದಾಗಿ ಹೇಳಿದ್ದರು.

ಆದರೆ ಈಗ ಬೇರೆ ಜಾತಿ ಎಂದು ಮದುವೆಗೆ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ನರೇಶ್‍ಗೆ ಬೇರೆ ಹುಡುಗಿ ಜೊತೆ ಮದುವೆ ಮಾಡಲು ನಿಶ್ಚಯ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ನೊಂದ ಯುವತಿ ಉಲ್ಲೇಖಿಸಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376, 417 ಮತ್ತು ಜಾತಿನಿಂದನೆ ಕೇಸನ್ನು ದಾಖಲಿಸಿ ಆರೋಪಿಯನ್ನು ಬಂಧಿಸಲಾಗದೆ.
 


ಸಂಬಂಧಿತ ಟ್ಯಾಗ್ಗಳು

ಫೇಸ್ ಬುಕ್ ನಾಟಕ ಸೆಕ್ಷನ್ ಪರಿಚಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ