ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದ ಎಸಿಬಿ

ACB Raid on Handloom & Textile Department officers

17-07-2018

ಬೆಂಗಳೂರು: ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ವಿಜಯಕುಮಾರ್ ಬಿ ನಿರಾಲಿ ಸೇರಿ ಮೂವರು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿರುವ  ಭ್ರಷ್ಟಾಚಾರ ನಿಗ್ರಹ ಪಡೆ (ಎಸಿಬಿ) ಅಧಿಕಾರಿಗಳು 8 ಸ್ಥಳಗಳ ಮೇಲೆ ಎಕಕಾಲದ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಆಸ್ತಿ-ಪಾಸಿ  ವಶಕ್ಕೆ ಪಡೆದುಕೊಂಡಿದ್ದಾರೆ.

ಕೈಮಗ್ಗ ಮತ್ತು ಜವಳಿ, ಜಂಟಿ ನಿರ್ದೇಶಕ ವಿಜಯಕುಮಾರ್ ಬಿ ನಿರಾಲಿ ಅವರ ರಾಜಾಜಿನಗರದ ವಾಸದ ಮನೆ ಸೇರಿ ಎರಡು ಮನೆ ಹಾಗೂ ಕಛೇರಿ, ಉಪ ನಿರ್ದೇಶಕ ಗಂಗಯ್ಯ ಅವರ ಹೆಲ್ತ್ ಲೇಔಟ್, ವಿಶ್ವನೀಡಂ ಪೋಸ್ಟ್ ನ ವಾಸದ ಮನೆ ಹಾಗೂ ದೊಡ್ಡನಕ್ಕೇರಿ ಗ್ರಾಮ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿರುವ ತೋಟದ ಮನೆ ಮತ್ತು ಕಛೇರಿ ಮೇಲೆ ದಾಳಿ ನಡೆಸಲಾಗಿದೆ.

ಇವರ ಜೊತೆ ಅರಣ್ಯ ಇಲಾಖೆಯ ಎಸಿಎಫ್ ಕೆ.ಎನ್, ರಂಗಸ್ವಾಮಿ ಅವರ ಕಲ್ಯಾಣನಗರ, ಚಿಕ್ಕಮಗಳೂರುನಲ್ಲಿರುವ ವಾಸದ ಮನೆ ಕಛೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿ ಹಲವು ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದೆ ಅಕ್ರಮ ಆಸ್ತಿ ಗಳಿಕೆ ಮಾಡಲಾಗಿದೆ ಎಂಬ ಮಾಹಿತಿ ಮೇರೆಗೆ ಏಕಕಾಲದ ದಾಳಿ ನಡೆಸಲಾಗಿದೆ. ದಾಳಿಗೊಳಗಾದ ನೌಕರರಿಗೆ ಸೇರಿದ ಬೆಂಗಳೂರು, ಚಿಕ್ಕಮಗಳೂರು, ಚನ್ನರಾಯಪಟ್ಟಣ ಸೇರಿದಂತೆ 8 ಕಡೆಗಳಲ್ಲಿ ದಾಳಿ ನಡೆಸಿ ಅಕ್ರಮ ಆಸ್ತಿ-ಪಾಸ್ತಿ ಪತ್ತೆಹಚ್ಚಿ ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ