ಕುಖ್ಯಾತ ರೌಡಿಗೆ ಚಾಕು ಇರಿತ

a rowdy attacked by a gang!

16-07-2018

ಬೆಂಗಳೂರು: ಸ್ನೇಹಿತರನ್ನು ಕಳುಹಿಸಿ ಮನೆಗೆ ಒಂಟಿ ನಡೆದುಕೊಂಡು ಹೋಗುತ್ತಿದ್ದ ಕುಖ್ಯಾತ ರೌಡಿ ನೆಲ್ಸನ್‍ನನ್ನು ಅಡ್ಡಗಟ್ಟಿರುವ  ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿರುವ ದುರ್ಘಟನೆ ದೇವರಜೀವನ ಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಕಾಡುಗೊಂಡನಹಳ್ಳಿಯ ನೆಲ್ಸನ್ (23) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

ದೇವರ ಜೀವನಹಳ್ಳಿ ರೌಡಿಪಟ್ಟಿಯಲ್ಲಿದ್ದ ನೆಲ್ಸನ್  ರಾತ್ರಿ 12.30ರ ವೇಳೆ ಮನೆಗೆ ನಡೆದುಕೊಂಡ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಆತನನ್ನು ಅಡ್ಡಕಟ್ಟಿ ಚಾಕುವಿನಿಂದ ದೇಹದ ಎರಡು ಕಡೆ ಇರಿದು ಪರಾರಿಯಾಗಿದ್ದಾರೆ. ಕೊಲೆಯತ್ನ, ಸುಲಿಗೆ ಬೆದರಿಕೆ ಇನ್ನಿತರ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ನೆಲ್ಸನ್‍ನನ್ನು ಹಳೆ ದ್ವೇಷದ ಹಿನ್ನಲೆಯಲ್ಲಿ ಎದುರಾಳಿ ಗುಂಪಿನವರು ಇರಿದು ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.ಪ್ರಕರಣ ದಾಖಲಿಸಿರುವ ದೇವರ ಜೀವನ ಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ