ನೂತನ ಗೋ ನಿರ್ವಹಣೆ ಕಾಯ್ದೆ ಇದೊಂದು ಬಲವಂತದ ಮತಾಂತರ !

Kannada News

29-05-2017

ಮೈಸೂರು:- ಕೇಂದ್ರದಿಂದ ನೂತನ ಗೋ ನಿರ್ವಹಣೆ ಕಾಯ್ದೆ ಜಾರಿಯಾದ ವಿಚಾರಕ್ಕೆ ಸಂಬಂಧಿಸಿದಂತೆ, ಇದೊಂದು ಬಲವಂತದ ಮತಾಂತರ ಎಂದು ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ. ಮಹಾತ್ಮಗಾಂಧೀಜಿಯವರ ಹೇಳಿಕೆ ಉಲ್ಲೆಖಿಸುವ ಮೂಲಕ ಉದಾಹರಣೆ ನೀಡಿದ ಸಚಿವ ಹೆಚ್.ಸಿ.ಮಹದೇವಪ್ಪ. ಒಂದು ಧರ್ಮದ ಆಹಾರ ಪದ್ದತಿಯನ್ನು ಇನ್ನೊಂದು ಧರ್ಮದ ಮೇಲೆ ಹೇರುವುದು ಮತಾಂತರಕ್ಕೆ ಸಮಾನ. ಈ ಮಾತನ್ನು ಸ್ವತಃ ಮಹಾತ್ಮ ಗಾಂಧಿಜಿಯವರೇ ಹೇಳಿದ್ದಾರೆ. ಹೀಗಾಗಿ ಬಿಜೆಪಿಯವರು ಇದನ್ನ ಭಾವನಾತ್ಮಕವಾಗಿ ಜನರ ಮೇರೆ ಹೇರಲು ಹೊರಟಿದ್ದಾರೆ. ಬಿಜೆಪಿ ಯ ಯಾವ ನಾಯಕರೂ ದನ ಮೇಯಿಸಿ, ತೊಪ್ಪೆ ಎತ್ತಿ, ತಿಪ್ಪೆಗೆ ಸುರಿದಿಲ್ಲ. ಬಿಜೆಪಿಯ ರಾಜಕೀಯ ಲಾಭಕ್ಕಾಗಿ ನಡೆದಿರುವ ಹುನ್ನಾರ ಇದಾಗಿದೆ ಎಂದು ತೀಕ್ಷ್ಣವಾಗಿ ನುಡಿದಿದ್ದಾರೆ . ಇದು ನೇರವಾಗಿ ರೈತರಿಗೆ ಸಂಬಂಧಿಸಿದ ವಿಷಯವಾಗಿದ್ದು, ಈ ಬಗ್ಗೆ ಎಲ್ಲರ ಅಭಿಪ್ರಾಯ ಪಡೆಯಬೇಕಿತ್ತು. ಈ ಕಾಯ್ದೆಯನ್ನು ಕೇಂದ್ರ ಸರ್ಕಾರ ಪುನರ್‌ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ರಾಜ್ಯಕ್ಕೆ ಕಾಯ್ದೆ ಪ್ರತಿ ಇನ್ನು ಸಿಕ್ಕಿಲ್ಲ. ಸಿಕ್ಕ ನಂತರ  ಈ ಬಗ್ಗೆ ಕಾನೂನಾತ್ಮಕ ಹೋರಾಟಕ್ಕೆ  ಚಿಂತನೆ ಮಾಡಲಾಗುವುದು. ಕಾಯ್ದೆ ಜಾರಿಯಿಂದ ಸಾಕಷ್ಟು ಉದ್ಯಮಕ್ಕೂ ಹೊಡೆತ ಬೀಳಲಿದೆ ಎನ್ನುವ ಮೂಲಕ ಕೇಂದ್ರದ ನೂತನ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ