ಬೆಂಗಳೂರಿನಲ್ಲಿ ಕೊಲಂಬಿಯಾ ದೇಶದ ಕಳ್ಳರು

Colombian country robbers in Bangalore

12-07-2018

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಜಯನಗರದ ಬಡಾವಣೆಯಲ್ಲಿ ಮನೆ ಕಳವು ಪ್ರಯತ್ನ ನಡೆದ ಹಿನ್ನೆಲೆಯಲ್ಲಿ ಸಿಸಿಟಿವಿ ಫೂಟೇಜ್‍ನಲ್ಲಿ ಕಂಡುಬಂದಂತೆ ಕಳವು ಮಾಡುವ ಪ್ರಯತ್ನ ಮಾಡಿದ್ದು ವಿದೇಶಿಗರಿದ್ದಂತ ಜನ ಎಂಬುದು ಸಾಬೀತಾಗಿತ್ತು. ಆದರೆ ಸ್ಪಷ್ಟವಾಗಿ ಯಾರು ಏನು ಎಂದು ಗೊತ್ತಾಗಿರಲಿಲ್ಲ. ಆದರೆ, ತನಿಖೆ ನಡೆದ ಮೇಲೆ ಮನೆ ಕಳ್ಳತನ ಮಾಡಲು ಪ್ರಯತ್ನ ಪಟ್ಟ ಆರೋಪಿಗಳು ದಕ್ಷಿಣ ಅಮೆರಿಕಾದಲ್ಲಿರುವ ಕೊಲಂಬಿಯಾ ದೇಶದ ಪ್ರಜೆಗಳು ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ಮಾಡಿದ ಜಯನಗರ ಪೊಲೀಸರು ಆ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ನಗರದ 5 ಮಂದಿಯ ಈ ತಂಡ ಬೆಂಗಳೂರಿನಲ್ಲಿ ಈಗಾಗಲೇ ಅನೇಕ ಕಡೆ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಪೊಲೀಸರ ಇತಿಹಾಸದಲ್ಲೇ ವಿದೇಶಿಯರು ಮನೆ ಕಳ್ಳತನ ಮಾಡಿರುವುದು ಇದೇ ಮೊದಲ ಬಾರಿಗೆ. ಕೊಲಂಬಿಯಾ ದೇಶ ಡ್ರಗ್ಸ್ ಮತ್ತು ಅಪರಾಧಕ್ಕೆ ಕುಖ್ಯಾತವಾಗಿರುವ ದೇಶ. ಆ ದೇಶದ ಪ್ರಜೆಗಳು ಬೆಂಗಳೂರಿನಲ್ಲಿ ಅಪರಾಧಕ್ಕಿಳಿದಿರುವುದು ನಗರದ ಶಾಂತಿ ಪ್ರಿಯ ಜನರಿಗೆ ದೊಡ್ಡ ಆತಂಕವನ್ನೇ ಉಂಟುಮಾಡಿದೆ.

 

 

 


ಸಂಬಂಧಿತ ಟ್ಯಾಗ್ಗಳು

Colombia Drugs ಬಡಾವಣೆ ತನಿಖೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ