ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

Assembly session one day extension

12-07-2018 370

ಬೆಂಗಳೂರು: ಇಂದು ಅಂತ್ಯಗೊಳ್ಳಬೇಕಿದ್ದ ವಿಧಾನಸಭೆಯ ಮಳೆಗಾಲದ ಅಧಿವೇಶನ ಒಂದು ದಿನ ವಿಸ್ತರಣೆಗೊಂಡಿದೆ. ಅಧಿವೇಶನ ನಾಳೆಯೂ ನಡೆಯಲಿದ್ದು, ಇಂದಿರಾ ಕ್ಯಾಂಟೀನ್ ಅವ್ಯವಹಾರ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ.

ವಿಧಾನಸಭೆ ಕಲಾಪ ಒಂದು ದಿನ ಮುಂದುವರಿಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಸಭೆಯ ಬಳಿಕ ವಿಧಾನಸಭೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರ ಪ್ರಕಟಿಸಿದರು.

ಇಂದು ಮಧ್ಯಾಹ್ನದವರಗೆ ಬಜೆಟ್ ಮೇಲಿನ ಚರ್ಚೆ ಮುಂದುವರೆಯುತ್ತದೆ. ನಾಳೆ ಬಾಕಿ ಉಳಿದಿರುವ ಗಮನ ಸೆಳೆಯುವ ಸೂಚನೆಗಳ ಮಂಡನೆಗೆ ಅವಕಾಶ ನೀಡಲಾಗಿದೆ.

ಇವತ್ತಿಗೆ ಮಗಿಯಬೇಕಿದ್ದ ಅಧಿವೇಶನ ವಿಪಕ್ಷ ನಾಯಕ ಯಡಿಯೂರಪ್ಪ ಅವರ ಒತ್ತಾಯದ ಹಿನ್ನೆಲೆಯಲ್ಲಿ ನಾಳೆಯೂ ಮುಂದುವರೆಯಲಿದೆ. ಶುಕ್ರವಾರ ಅಮವಾಸ್ಯೆ ಹಿನ್ನೆಲೆಯಲ್ಲಿ  ಸದನದ ಕಲಾಪ ನಡೆಯಬಾರದು, ಇಂದೇ ಬಜೆಟ್‌ ಚರ್ಚೆಗೆ ಉತ್ತರ ನೀಡಿ ಕಲಾಪ ಅಂತ್ಯಗೊಳಿಸಲು ಸಚಿವ ಹೆಚ್‌.ಡಿ.ರೇವಣ್ಣ ಅವರು ಮುಂದಾಗಿದ್ದರು. ಆದರೆ ಅವರ ಲೆಕ್ಕಾಚಾರವನ್ನು ಬಿಜೆಪಿ ತಲೆಕೆಳಗೆ ಮಾಡಿದೆ.


ಸಂಬಂಧಿತ ಟ್ಯಾಗ್ಗಳು

session Ramesh kumar ವಿಪಕ್ಷ ನಾಯಕ ಬಜೆಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ