ಕೈಹಿಡಿದು ಸಿದ್ದರಾಮಯ್ಯರನ್ನು ಕರೆತಂದ ಕುಮಾರಸ್ವಾಮಿ

All the leaders participated in a dinner party at vidhana soudha

12-07-2018

ಬೆಂಗಳೂರು: ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ಇಂದು ಭೋಜನ ಕೂಟ ಆಯೋಜಿಸಿದ್ದರು. ರಾಜಕೀಯ ಮರೆತು ಭೋಜನ ಕೂಟದಲ್ಲಿ ಎಲ್ಲಾ ನಾಯಕರು ಪಾಲ್ಗೊಂಡರು.

ಒಂದೇ ಟೇಬಲ್ ನಲ್ಲಿ ಕುಳಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಊಟ ಮಾಡಿದರು.

ಸಿದ್ದರಾಮಯ್ಯ ಬರುವರೆಗೂ ಬ್ಯಾಕ್ವೆಂಟ್ ಹಾಲ್ ದ್ವಾರದ ಮುಂದೆ ನಿಂತಿದ್ದ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಬಂದ ಬಳಿಕ ಅವರ ಕೈ ಹಿಡಿದು ಟೇಬಲ್ ಬಳಿ ಹತ್ತಿರ ಕರೆದುಕೊಂಡು ಹೋದರು. ಸಿದ್ದರಾಮಯ್ಯ ಜೊತೆ ಊಟ ಮಾಡುತ್ತಿದ್ದ ವೇಳೆ ಬಿಜೆಪಿ ನಾಯಕ ಬರೋದನ್ನ ನೋಡಿದ ಕುಮಾರಸ್ವಾಮಿ ಅರ್ಧಕ್ಕೆ ಊಟ ಬಿಟ್ಟು, ಯಡಿಯೂರಪ್ಪ ಅವರನ್ನು ಬರಮಾಡಿಕೊಂಡರು. ಮುಖ್ಯ ಮಂತ್ರಿಗಳು ಆಯೋಜಿಸಿದ್ದ ಭೋಜನ ಕೂಟದಲ್ಲಿ ಸಚಿವರು, ವಿಧಾನ ಮಂಡಲದ ಉಭಯ ಸದನಗಳ ಸದಸ್ಯರು ಪಾಲ್ಗೊಂಡರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ