ನಟ ಯಶ್ ಹತ್ಯೆಗೆ ಸ್ಕೆಚ್..? ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ರೌಡಿ

An rowdy team planned to murder yash: said arrested rowdy

12-07-2018

ಬೆಂಗಳೂರು: ಗುಂಡಿನ ದಾಳಿ ನಡೆಸಿ ಬಂಧಿಸಿರುವ ಕುಖ್ಯಾತ ರೌಡಿ ಸೈಕಲ್ ರವಿ ವಿಚಾರಣೆ ವೇಳೆ ಕನ್ನಡದ ಖ್ಯಾತ ನಟ ಯಶ್ ಕೊಲೆಗೆ ಸಂಚು ರೂಪಿಸಿದ್ದ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದ್ದು, ಈ ಸಂಬಂಧ ರೌಡಿ ಕೋದಂಡನಿಗಾಗಿ ಕೇಂದ್ರ ಅಪರಾಧ(ಸಿಸಿಬಿ)ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ.

ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಎರಡು ವರ್ಷಗಳ ಹಿಂದೆಯೇ ನಟ ಯಶ್ ಹತ್ಯೆಗೆ ಸ್ಕೆಚ್ ಹಾಕಲಾಗಿದ್ದನ್ನು ಕುಖ್ಯಾತ ರೌಡಿ ಸೈಕಲ್ ರವಿ ಮತ್ತೊಬ್ಬ ರೌಡಿ ಜೊತೆ ಸೇರಿ ಸಂಚು ರೂಪಿಸಿದ್ದ ಆಘಾತ ಸುದ್ದಿಯನ್ನು ಬಾಯಿಬಿಟ್ಟಿದ್ದು ಇದನ್ನು ಆಧರಿಸಿ ಕೋದಂಡನ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ 2016ರ ಜನವರಿ 8ರಂದು ಕನಕಪುರ ಫಾರ್ಮ್ ಹೌಸ್ ನಲ್ಲಿಯೇ ಸೈಕಲ್ ರವಿ ಹಾಗೂ ಕೋದಂಡ ಯಶ್ ಕೊಲೆಗೆ ಸಂಚು ರೂಪಿಸಿದ್ದರು. ಕೋದಂಡನ ಮೂಲಕ ಯಶ್ ಅವರನ್ನು ಕೊಲ್ಲಲು ಸ್ಕೆಚ್ ಹಾಕಲಾಗಿತ್ತು. ಅದರಂತೆ ಕುಡಿದ ಮತ್ತಿನಲ್ಲಿಯೇ ಯಶ್ ಕಾರಿನ ಮೇಲೆ ಪುಡಿ ರೌಡಿಗಳು ಕಲ್ಲು ತೂರಾಟ ಮಾಡಿದ್ದರು. ಆದರೆ ಅಂದು ಯಶ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಅಂದು ಯಶ್ ಹತ್ಯೆಗೆ ಮೊತ್ತೊಬ್ಬ ನಟನ ಕೈವಾಡ ಇದೆ ಎಂದು ಆರೋಪ ಕೇಳಿಬಂದಿದೆ. ಆದರೆ ನಟನ ಸಂಚಿನ ಬಗ್ಗೆಯೂ ಪೊಲೀಸರು ತೀವ್ರ ತನಿಖೆ ಮಾಡುತ್ತಿದ್ದಾರೆ. ಸದ್ಯಕ್ಕೆ ತನಿಖೆಯ ಯಾವುದೇ ಮಾಹಿತಿಯನ್ನು ಪೊಲೀಸರು ಬಹಿರಂಗ ಪಡಿಸುತ್ತಿಲ್ಲ.

ಕೋದಂಡ ಯಾರು? ಸದ್ಯಕ್ಕೆ ಕೋದಂಡ ಎಲ್ಲಿದ್ದಾನೆ ಎಂಬ ಸುಳಿಯೂ ಸಿಗುತ್ತಿಲ್ಲ. ಅವನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಕೋದಂಡ ಹಲವು ಪ್ರಕರಣಗಲ್ಲಿ ಬೇಕಾಗಿರುವ ಆರೋಪಿಯಾಗಿದ್ದು, ಇದುವರೆಗೂ ಪೊಲೀಸರ ಬಲೆಗೆ ಬಿದ್ದಿಲ್ಲ. ಕೋದಂಡ ಮತ್ತು ಸೈಕಲ್ ರವಿ ಇಬ್ಬರು ರೌಡಿಗಳಾಗಿದ್ದು, ವಿರೋಧಿಗಳಾಗಿದ್ದರು. ಆದರೆ ಒಬ್ಬರನ್ನು ಮುಗಿಸುವ ಸಲುವಾಗಿ ಇಬ್ಬರು ರಾಜಿ ಮಾಡಿಕೊಂಡಿದ್ದರು.

ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದ ಹಿನ್ನೆಲೆಯಲ್ಲಿ ನಿರ್ಮಾಪಕ ಜಯಣ್ಣ ಅವರ ಜೊತೆ ಹೋಗಿ ಯಶ್ ಕಮಿಷನರ್ ಕಚೇರಿಗೆ ಹೋಗಿ ಯಶ್ ಮೌಖಿಕ ದೂರು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ. ದೂರಿನ ಆಧಾರದ ಮೇಲೆ ಮೈಸೂರು ಕರ್ನಾಟಕ ಭಾಗದಲ್ಲಿ ಬೆಂಗಳೂರಿನ ಕೆಲವು ರೌಡಿಗಳನ್ನು ವಶಕ್ಕೆ ಪಡೆದ ವಿಚಾರಣೆ ಮಾಡಿದ್ದು, ಜೈಲಿಗೂ ಕಳುಹಿಸಿದ್ದರು.

ಹತ್ಯೆಯ ಸಂಚಿನ ಪ್ರಕರಣ ಬೆಳಕಿಗೆ ಬಂದ ನಂತರ ಯಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ಈ ಬಗ್ಗೆ ಲೈವ್ ಆಗಿ ಮಾತನಾಡುತ್ತೇನೆ ಎಂದು ಯಶ್ ಹೇಳಿದ್ದಾರೆ. ಜೂನ್ 27ರಂದು ಸಿಸಿಬಿ ಪೊಲೀಸರು ಶೂಟೌಟ್ ಮಾಡಿ ರೌಡಿ ಸೈಕಲ್ ರವಿಯನ್ನು ಬಂಧಿಸಿದ್ದರು.


ಸಂಬಂಧಿತ ಟ್ಯಾಗ್ಗಳು

Actor Yesh ಶೂಟೌಟ್ ಸೈಕಲ್ ರವಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ