ಯುವತಿಯರೊಂದಿಗೆ ಅಶ್ಲೀಲ ಸಂಭಾಷಣೆ: ಕಾಮುಕನ ಬಂಧನ

Sexual conversation with young girls: accused arrest

12-07-2018 231

ಬೆಂಗಳೂರು: ಉದ್ಯೋಗ ಕೊಡಿಸುವ ನೆಪದಲ್ಲಿ ಯುವತಿಯರ ಬಳಿ ಅಶ್ಲೀಲ ಸಂಭಾಷಣೆ ನಡೆಸುತ್ತಿದ್ದ ಕಾಮುಕನನ್ನು ನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಅನಂತ್ ಹೆಬ್ಬಾರ್ ಅಲಿಯಾಸ್ ಮಹೇಶ್ ರಾವ್ ಬಂಧಿತ ಆರೋಪಿಯಾಗಿದ್ದಾನೆ. ಈತ ತಾನು ಅತಿದೊಡ್ಡ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನ ಮಾನವ ಸಂಪನ್ಮೂಲ (ಹೆಚ್‍.ಆರ್) ವಿಭಾಗದ ಮ್ಯಾನೇಜರ್ ಎಂದು ಹೇಳಿಕೊಂಡಿದ್ದ. ನೌಕರಿ ಡಾಟ್‍ ಕಾಂ ನಲ್ಲಿ ಸ್ವವಿವರ ಹಾಕುವ ಯುವತಿಯರನ್ನು ಗುರಿಯಾಗಿಸಿಕೊಂಡು ಒಮ್ಮೊಮ್ಮೆ ಮಹಿಳೆಯರ ಧ್ವನಿಯಲ್ಲೂ ಮಾತನಾಡುತ್ತಿದ್ದ.

ಹೀಗೆ ಮಹಿಳೆಯೋರ್ವಳ ಬಳಿ ಅಶ್ಲೀಲವಾಗಿ ಮಾತನಾಡಿದ್ದಕ್ಕೆ ಆಕೆ ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಜತೆ ಡೇಟಿಂಗ್ ಮಾಡಬೇಕು. ಡೇಟಿಂಗ್ ಕೂಡ ಇಂಟರ್ವ್ಯೂದ ಒಂದು ಭಾಗ. ಇದಕ್ಕಾಗಿ ರೆಸಾರ್ಟ್‍ನಲ್ಲಿ ರೂಂ ಬುಕ್ ಮಾಡಬೇಕು ಎಂದು ಹೇಳಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದರು. ಮಹಿಳೆಯ ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇವನನ್ನು ಈ ಹಿಂದೆ 2017ರಲ್ಲಿ ಯಶವಂತಪುರ ಪೊಲೀಸರು ಬಂಧಿಸಿದ್ದರು ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

interview Facebook ಅಶ್ಲೀಲ ಉದ್ಯೋಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ