ಬಿಬಿಎಂಪಿ ಅಧಿಕಾರಿಗಳಿಗೆ ಮೇಯರ್ ತರಾಟೆ

Mayor Sampath Raj angry on bbmp officers

12-07-2018

ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮೇಯರ್ ಸಂಪತ್ ರಾಜ್. ಪೌರಕಾರ್ಮಿಕರಿಗೆ ಸಂಬಳ ನೀಡದ‌ ವಿಚಾರದ ಕುರಿತು ಕೋಪಗೊಂಡ ಅವರು, ಜಂಟಿ ಆಯುಕ್ತರು ಸೇರಿದಂತೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಪೌರಕಾರ್ಮಿಕರಿಗೆ ಬಯೋಮೆಟ್ರಿಕ್‌ನಲ್ಲಿ ಪಂಚ್ ಮಾಡಿಸಿಕೊಂಡ ಮೇಲೆ‌ ಯಾಕೆ‌ ಸಂಬಳ ನೀಡಿಲ್ಲ? ಹೆಚ್ಚುವರಿಯಾಗಿ ಪೌರಕಾರ್ಮಿಕರರನ್ನು ನೇಮಸಿಕೊಂಡು ಮೇಲೆ ಸಂಬಳ ಯಾಕೆ ನೀಡಿಲ್ಲ? ಸಭೆಯಲ್ಲಿ ಉತ್ತರಿಸುವಂತೆ ಮೇಯರ್ ಆದೇಶಿಸಿದ್ದಾರೆ. ಪೌರಕಾರ್ಮಿಕರಿಗೆ ಯಾಕೆ ತುರ್ತಾಗಿ ಸಂಬಳ‌ ನೀಡಿಲ್ಲ, ಸಂಬಳ‌ ನೀಡಲು ಸಾಧ್ಯವಿಲ್ಲ ಎಂದ‌ ಮೇಲೆ ಪೌರಕಾರ್ಮಿಕರನ್ನು ತೆಗೆದುಕೊಂಡಿದ್ದು ಯಾಕೆ? ಎಂದು ಮತ್ತೊಮ್ಮೆ ಪ್ರಶ್ನಿಸಿ ಅಧಿಕಾರಿಗಳ ಕಾರ್ಯವೈಖರಿಗೆ ಗರಂ ಆಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sampath Raj Mayor ಬಿಬಿಎಂಪಿ ಬಯೋಮೆಟ್ರಿಕ್‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ