ಪೊಲೀಸ್ ಠಾಣೆ ಮಟ್ಟಿಲೇರಿದ ಶಿಲ್ಪಾಗಣೇಶ್

shilpa ganesh lodge a complaint in rajarajeshwari nagar police station

12-07-2018

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಾಡಪ್ರಭು ಕಂಪೇಗೌಡರ ವಿರುದ್ಧ ನಕಲಿ ಹೇಳಿಕೆ ಸೃಷ್ಟಿ ಮಾಡಿರುವವರ ವಿರುದ್ಧ ನಟ ಗಣೇಶ್ ಪತ್ನಿ ಶಿಲ್ಪಾ ರಾಜರಾಜೇಶ್ವರಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಶಿಲ್ಪಾ ಗಣೇಶ್ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಕೆಂಪೇಗೌಡರಿಗಿಂತ ಸಾಧನೆ ಮಾಡಿದವರು ಅನೇಕರಿದ್ದಾರೆ. ಸಿಲ್ಕ್ ಯೂನಿವರ್ಸಿಟಿಗೆ ಕೆಂಪೇಗೌಡರ ಹೆಸರಿಡುವ ಅವಶ್ಯಕತೆ ಇರಲಿಲ್ಲ. ಹೀಗೆಂದು ಫೋಟೋ ಸಮೇತ ಪೋಸ್ಟ್ ಮಾಡಲಾಗಿತ್ತು. ಈ ವಿಷಯವಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಇದು ಕಿಡಿಗೇಡಿಗಳ ಕೃತ್ಯವಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಲ್ಪಾ ಗಣೇಶ್ ದೂರಿನಲ್ಲಿ ವಿನಂತಿಸಿದ್ದಾರೆ.

ನಾಡಪ್ರಭು ಕೆಂಪೇಗೌಡ ಅವರ ಮೇಲೆ ನನಗೆ ಅಪಾರವಾದ ಗೌರವವಿದೆ, ಅವರನ್ನು ಅವಮಾನ ಮಾಡುವಂತಹ ಯಾವುದೇ ಹೇಳಿಕೆ ನಾನು ನೀಡಿಲ್ಲ. ಅಂತಹ ಯಾವುದೇ ಹೇಳಿಕೆ ನನ್ನ ವೈಯಕ್ತಿಕ ಫೇಸ್ ಬುಕ್, ಟ್ಟೀಟ್ಟರ್ ಖಾತೆಗಳಲ್ಲಿ ನಾನು ಹೇಳಿಲ್ಲ, ಯಾರೋ ಕಿಡಿಗೇಡಿಗಳು ನನ್ನ ವಿರುದ್ಧ ಷಡ್ಯಂತ್ರ ಮಾಡಿ ಇದನ್ನು ಸೃಷ್ಟಿಸಿದ್ದು ಅವರನ್ನು ಪತ್ತೆ ಮಾಡಿ ಎಂದು ಪೊಲೀಸರಿಗೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ.

ದೂರಿನ ವಿವರ: ಯಾರೋ ಅಪರಿಚಿತರು ಸಾಮಾಜಿಕ ಜಾಲತಾಣದಲ್ಲಿ ನನ್ನ ಭಾವಚಿತ್ರವನ್ನು ಬಳಸಿಕೊಂಡು ನಾಡಪ್ರಭು ಕಂಪೇಗೌಡರ ವಿರುದ್ಧ ನಕಲಿ ಹೇಳಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ. ಜುಲೈ 6ರಂದು ನಾನು ಎಂದಿನಂತೆ ನನ್ನ ವಾಟ್ಸಾಪ್ ತೆಗೆದು ನೋಡಿದಾಗ ಗಿರಿಗೌಡ ಎಂಬವರ ನಂಬರ್ ನಿಂದ ನಾನು ಬರೆಯದೆ ಮತ್ತು ಹೇಳದೆ ಇರುವಂತಹ ಹೇಳಿಕೆಯನ್ನು ಭಾವಚಿತ್ರ ಸಮೇತ ಸೃಷ್ಟಿ ಮಾಡಲಾಗಿತ್ತು. ಅದರಲ್ಲಿ ನಾಡಪ್ರಭು ಕೆಂಪೇಗೌಡರ ಬಗ್ಗೆ ``ಕೆಂಪೇಗೌಡರಿಗಿಂತ ಸಾಧನೆ ಮಾಡಿದವರು ಅನೇಕರಿದ್ದಾರೆ. ಸ್ಕಿಲ್ ಯುನಿವರ್ಸಿಟಿಗೆ ಕೆಂಪೇಗೌಡರ ಹೆಸರಿಡುವ ಅವಶ್ಯಕತೆ ಇರಲಿಲ್ಲ'' ಎಂದು ಬರೆದು ಅದರ ಕೆಳಗೆ ಶಿಲ್ಪಾ ಗಣೇಶ್ ಎಂದು ನನ್ನ ಹೆಸರನ್ನು ಬರೆದಿದ್ದಾರೆ.

ಇದನ್ನು ನೋಡಿದ ನನಗೆ ಆಶ್ಚರ್ಯವಾಯಿತ್ತು. ಕೂಡಲೇ ನಾನು ನನ್ನ ನಿಜವಾದ ಫೇಸ್‍ ಬುಕ್ ಹಾಗೂ ಟ್ಟೀಟ್ಟರ್ ಖಾತೆಯಿಂದ ನಕಲಿ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದೇನೆ. ನಾಡಪ್ರಭು ಕೆಂಪೇಗೌಡರ ಬಗ್ಗೆ ಅಪಾರವಾದ ಗೌರವವಿದೆ. ಅವರನ್ನು ಅವಮಾನ ಮಾಡುವಂತಹ ಯಾವುದೇ ಹೇಳಿಕೆಗಳನ್ನು ನಾನು ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದೇನೆ. ನನ್ನ ಹೆಸರನ್ನು ಬಳಸಿಕೊಂಡು ವಿನಾಕಾರಣ ಹೆಸರಿಗೆ ಚ್ಯುತಿ ತರುವ ಕೆಲಸವನ್ನು ಮಾಡಿರುವವರನ್ನು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಆರ್.ಆರ್.ನಗರ ಪೊಲೀಸರು ಕಿಡಿಗೆಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ