‘ಬೇಟಿ ಬಚಾವೋ ಬೇಟಿ ಪಡಾವೋ ಅತಿ ದೊಡ್ಡ ಸುಳ್ಳು’: ಕೆ.ಸುಧಾಕರ್

MLA K.Sudhakar criticise with Tweet about central government programme

12-07-2018

ಚಿಕ್ಕಬಳ್ಳಾಪುರ: ‘ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಬೇಟಿ ಬಚಾವೋ ಬೇಟಿ ಪಡಾವೋ ಅತಿ ದೊಡ್ಡ ಸುಳ್ಳು’ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್, ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ್ದಾರೆ. ಮೋದಿ ಘೋಷಣೆಗೆ ಟಾಂಗ್ ಕೊಟ್ಟ ಶಾಸಕ, ಅಂಕಿ ಅಂಶಗಳ ಸಮೇತ ಮೋದಿ ಸರ್ಕಾರದ ಕಾರ್ಯಕ್ರಮದ ಬಗ್ಗೆ ವ್ಯಂಗ್ಯವಾಡಿದ್ದಾರೆ.

'ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ರಾಜ್ಯ ಮಧ್ಯಪ್ರದೇಶ. ಕಳೆದ ವರ್ಷ 4744 ಅತ್ಯಾಚಾರ ಪ್ರಕರಣ ಮಹಾರಾಷ್ಟ್ರದಲ್ಲಿ ನಡೆದಿವೆ. 2552 ಅಪ್ರಾಪ್ತರ ಮೇಲೆ ಅತ್ಯಾಚಾರವಾಗಿರೋದು ಶೋಚನೀಯ ವಿಷಯ, ಅತ್ಯಂತ ದುಃಖ ಪಡುವ ಸತ್ಯವಾಗಿದೆ' ಎಂದು ಟ್ವೀಟ್ ಮಾಡುವ ಮೂಲಕ, ಮೋದಿಯ ಕಾರ್ಯಕ್ರಮಗಳು ಕೇವಲ ಸುಳ್ಳಿನ ಸರಮಾಲೆ ಎಂದು ಟೀಕೆ ಮಾಡಿದ್ದಾರೆ. ಶಾಸಕ ಸುಧಾಕರ್ ಅವರ ಈ ಟ್ಟೀಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ