ಕೆರೆಗೆ ಹಾರಿ ವ್ಯಕ್ತಿಯ ಆತ್ಮಹತ್ಯೆ !

Kannada News

29-05-2017

ಮೈಸೂರು:- ಮಕ್ಕಳಿಲ್ಲದ ಕೊರಗಿನಿಂದ ಬೇಸತ್ತ ವ್ಯಕ್ತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಲಕ್ಷ್ಮಣ್ ನಾಯಕ(೩೫)ಮೃತ ವ್ಯಕ್ತಿ. ಮೈಸೂರಿನ ಜಯಪುರ ಹೋಬಳಿ ಎಡಹಳ್ಳಿ ಗ್ರಾಮದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೧೦ ವರ್ಷಗಳ ಹಿಂದೆ ಕವಿತಾ ಎಂಬುವರನ್ನು ವಿವಾಹವಾಗಿದ್ದ ಲಕ್ಷ್ಮಣ್ ನಾಯಕ ಮಕ್ಕಳಿಲ್ಲ ಎಂಬ ಕೊರಗಿನಿಂದ ಬೇಸತ್ತಿದ್ದರು, ಶುಕ್ರವಾರ ಮನೆ ಬಿಟ್ಟಿದ್ದ ಲಕ್ಷ್ಮಣ್ ನಾಯಕ ಶವವಾಗಿ ಪತ್ತೆಯಾಗಿದ್ದಾರೆ.  ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ