ಇದ್ದೂ ಇಲ್ಲದಂತಾದ ಸರ್ಕಾರದ ‘ಸುರಕ್ಷಾ’ ಆ್ಯಪ್‍!

No updation of government

11-07-2018

ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ನಗರ ಪೊಲೀಸರು ಜಾರಿಗೆ ತಂದಿರುವ `ಸುರಕ್ಷಾ' ಆ್ಯಪ್‍ಗೆ ದೂರುಗಳನ್ನು ನೀಡುವವರ ಸಂಖ್ಯೆಯೇ ಕಡಿಮೆಯಾಗಿರುವುದಕ್ಕೆ ಆ್ಯಪ್ ಮೇಲ್ದರ್ಜೆಗೇರಿಸದಿರುವುದೇ (ಅಪ್‍ಡೇಟ್) ಪ್ರಮುಖ ಕಾರಣವಾಗಿದೆ.!

ಗೂಗಲ್ ಫ್ಲೇಸ್ಟೋರ್ ನಲ್ಲಿ ‘ಸುರಕ್ಷಾ' ಆ್ಯಪ್‍ 50 ಸಾವಿರಕ್ಕೂ ಅಧಿಕ ಮಂದಿ  ಡೌನ್‍ ಲೋಡ್ ಮಾಡಿರುವ ಅಧಿಕೃತ ಮಾಹಿತಿ ದೊರೆತಿದ್ದು ಅನೇಕರು ಆ್ಯಪ್ ಲೋಪ-ದೋಷಗಳನ್ನು ಎತ್ತಿಹಿಡಿದಿದ್ದಾರೆ.

ಮಕ್ಕಳು, ಯುವತಿಯರು, ಮಹಿಳೆಯರು ಯಾವುದಾದರು ಸಮಸ್ಯೆಯಲ್ಲಿದ್ದಾಗ `ಸುರಕ್ಷಾ' ಆ್ಯಪ್‍ನಲ್ಲಿರುವ ಕೆಂಪು ಬಣ್ಣದ ಗುಂಡಿಯನ್ನು ಒತ್ತಿದರೆ ಸಾಕು, ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಸಂದೇಶ ರವಾನೆಯಾಗುತ್ತದೆ.

ಅಷ್ಟೇ ಅಲ್ಲದೆ, ಸಂತ್ರಸ್ಥರು ಇರುವ ಸ್ಥಳವು ಕೂಡಾ ಆ್ಯಪ್ ಮೂಲಕ ಅವರಿಗೆ ತಿಳಿಯುತ್ತದೆ.ಇದರ ಆಧಾರದಲ್ಲಿ ಪೊಲೀಸರು ತಕ್ಷಣ ಕಾರ್ಯ ಪ್ರವತ್ತರಾಗುರತ್ತಾರೆ. ಕಳೆದ 2017ರ ಏಪ್ರಿಲ್ 10ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು `ಸುರಕ್ಷಾ' ಆ್ಯಪ್‍ನ್ನು ಬಿಡುಗಡೆ ಮಾಡಿದ್ದರು.

ಆದರೆ, ಇದುವರೆಗೂ ಗರಿಷ್ಠ ದೂರುಗಳು ಬಂದಿಲ್ಲ. ಇನ್ನೂ, ಆ್ಯಪ್ ಡೌನ್‍ಲೋಡ್ ಮಾಡಿಕೊಂಡ  ಸಾರ್ವಜನಿಕರು ಪರೀಕ್ಷಾರ್ಥವಾಗಿ ಕೆಂಪು ಬಟನ್ ಒತ್ತಿ ಪ್ರಯೋಗಿಸುತ್ತಿದ್ದಾರೆ. ಈ ಬಟನ್ ಒತ್ತಿದ ಕೂಡಲೇ ನಿಯಂತ್ರಣ ಕೊಠಡಿಗೆ ಮಾಹಿತಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಪುನಃ ಕರೆ ಮಾಡಿದರೆ ಪರೀಕ್ಷಾರ್ಥವಾಗಿ ಉಪಯೋಗಿಸುತ್ತಿದ್ದೇವೆ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

ಆ್ಯಪ್ ಬಗ್ಗೆ ಅರಿವು ಮೂಡಿಸಲು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಜೊತೆಗೆ, ಕನ್ನಡದ ಹಿರಿಯ ನಟಿ ಸುಧಾರಾಣಿ ಸೇರಿದಂತೆ ಅನೇಕರು ಈ ಆ್ಯಪ್ ಬಗ್ಗೆ ಸ್ವಯಂ ಮಾಹಿತಿ ನೀಡಿದ್ದರು. ಇನ್ನೂ, ಮಹಿಳಾ ಉದ್ಯೋಗಿಗಳು ಹೆಚ್ಚಿರುವ ಐಟಿ ಕಂಪನಿಗಳಿಗೆ ಆಯಾ ವಿಭಾಗದ ಡಿಸಿಪಿಗಳ ಮೂಲಕ ನೂತನ ಆ್ಯಪ್ ಬಗ್ಗೆ  ಸಂಸ್ಥೆಯವರಿಗೆ ಪತ್ರ ಬರೆದು ಮಾಹಿತಿ ನೀಡಲಾಗಿತ್ತು.

ಸಾರ್ವಜನಿಕರು ಭಯದಿಂದ ಠಾಣೆಗೆ ಬಂದು ಪೊಲೀಸರೊಂದಿಗೆ ಮುಕ್ತವಾಗಿ ಕೆಲವೊಂದು ವಿಷಯ ತಿಳಿಸಲು ಹಿಂಜರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿನೂತನ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ. ಸಣ್ಣ ವಿಚಾರಗಳನ್ನು ಪೊಲೀಸರಿಗೆ ತಿಳಿಸದೇ ಇರುವುದರಿಂದ ಅದೇ ದೊಡ್ಡ ವಿಚಾರವಾಗಿ ಪರಿವರ್ತನೆಗೊಳ್ಳುತ್ತದೆ. ಠಾಣೆಗೆ ಹೋಗಲು ಹಿಂಜರಿಯುವವರು ನೇರವಾಗಿ ಆ್ಯಪ್ ಮೂಲಕ ದೂರು ನೀಡಬಹುದು. ದೂರಿನ ಗಂಭೀರತೆಯನ್ನು ಅರಿತು ಎಫ್‍ಐಆರ್ ದಾಖಲು ಮಾಡಿಕೊಳ್ಳಲಾಗುವುದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.

ಫೇಸ್‍ ಬುಕ್, ವಾಟ್ಸ್ ಆ್ಯಪ್ ಮೂಲಕ ದೂರು ನೀಡುವ ಪ್ರಕ್ರಿಯೆ, ಮಹಿಳೆಯರ ರಕ್ಷಣೆಗೆ ಪ್ರತ್ಯೇಕ ಆ್ಯಪ್ ಅನ್ನು ದೇಶದ ಕೆಲವೆಡೆಗಳಲ್ಲಿ ಪೊಲೀಸರು ಜಾರಿಗೆ ತಂದಿದ್ದಾರೆ. ಆದರೆ, ಅದನ್ನು ತಂತ್ರಿಕಾವಾಗಿ ಅಪ್‍ ಡೇಟ್ ಮಾಡದ ಕಾರಣ, ಅನೇಕರನ್ನು ಇದನ್ನು ಬಳಕೆ ಮಾಡಲು ಮುಂದಾಗುವುದಿಲ್ಲ. ಇನ್ನಾದರೂ, ಇಲಾಖೆಗಳ ಆ್ಯಪ್ ಗಳನ್ನು ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿ ಎಂದು ಹಲವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suraksha app bangaluru ಇಲಾಖೆ ಆಧಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ