ಮನೆಗೆ ನುಗ್ಗಿ ಚಿನ್ನಾಭರಣಗಳ ಲೂಟಿ

Robbery: lakhs worth gold looted at bengaluru

11-07-2018 318

ಬೆಂಗಳೂರು: ಬೆಳ್ಳಂದೂರಿನ ದೊಡ್ಡಕನ್ನಳ್ಳಿಯ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು, 100ಗ್ರಾಂ. ಚಿನ್ನಾಭರಣ ಸೇರಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ದೊಡ್ಡಕನ್ನಳ್ಳಿ ಕಾಲೋನಿಯ ಎಟಿಐ ಕಾಲೇಜು ಬಳಿಯ ಮನೆಗೆ ಬೀಗ ಹಾಕಿಕೊಂಡು ಅರುಣ್ ಕುಮಾರ್ ಅವರು ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬಂದು ನೋಡಿದಾಗ ಬೀಗ ಮುರಿದು ನುಗ್ಗಿದ್ದ ದುಷ್ಕರ್ಮಿಗಳು, 100ಗ್ರಾಂ. ಚಿನ್ನಾಭರಣ ಸೇರಿ ಲಕ್ಷಾಂತರ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Robbery Gold ದುಷ್ಕರ್ಮಿ ಚಿನ್ನಾಭರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ