ಕೈ ಶಾಸಕರಿಗೆ ಸಿದ್ದು-ಪರಂ ಕಟ್ಟುನಿಟ್ಟಿನ ಸೂಚನೆ!

congress legislature party meeting was headed by siddaramaiah today at vidhana soudha

11-07-2018

ಬೆಂಗಳೂರು: ಮಾಜಿ ಸಿಎಂ ಹಾಗು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು, ವಿಧಾನಸೌಧದ ಕಾನ್ಫರೆನ್ಸ್ ಹಾಲ್ ನಲ್ಲಿ  ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು. ನಾಳೆ ವಿಧಾನ ಸಭೆಯಲ್ಲಿ ಹಣಕಾಸು ಮಸೂದೆ ಮಂಡನೆ ವಿಚಾರದ ಕುರಿತು ಸಭೆಯಲ್ಲಿ ಚರ್ಚಿಸಿದ್ದು, ಯಾವುದೇ ಅಸಮಾಧಾನಗಳಿದ್ದರೂ ನಾಳೆ ಎಲ್ಲ ಕಾಂಗ್ರೆಸ್ ಸದಸ್ಯರು ಸದನಕ್ಕೆ ಹಾಜರಾಗುವಂತೆ ಸಿದ್ದರಾಮಯ್ಯ ಮತ್ತು ಡಿಸಿಎಂ ಪರಮೇಶ್ವರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ ಶಾಸಕರು ಗೈರು ಹಾಜರಾದರೆ 104 ಶಾಸಕರಿರುವ ಬಿಜೆಪಿ ಲಾಭ ಪಡೆಯಲು ಮುಂದಾಗಬಹುದು. ಕಾಂಗ್ರೆಸ್ ಶಾಸಕರು ಕಡಿಮೆ ಸಂಖ್ಯೆಯಲ್ಲಿದ್ದರೆ ಹಣಕಾಸು ಬಿಲ್ ಮತಕ್ಕೆ ಹಾಕಿ ಎಂದು ಬಿಜೆಪಿ ಕೇಳಬಹುದು. ಮೈತ್ರಿ ಸರ್ಕಾರ ಚೊಚ್ಚಲ ಬಜೆಟ್ ನ ಹಣಕಾಸು ಬಿಲ್ ವಿಧಾನಸಭೆಯಲ್ಲಿ ಬಿದ್ದು ಹೋದರೆ ಸರ್ಕಾರಕ್ಕೆ ಅಪಾಯ ಎಂದು ವಿವರಿಸಿ ಹೇಳಿದ್ದಾರೆ.

ಇದರ ನಡುವೆ ಸಭೆಯಲ್ಲಿ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳಿಗೆ ನೇಮಕಾತಿ ಸಂಬಂಧ ಡಿಸಿಎಂ, ಮಾಜಿ ಸಿಎಂರನ್ನು ಕಾಂಗ್ರೆಸ್ ಶಾಸಕರು ಪ್ರಶ್ನಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ