ರಸ್ತೆಯಲ್ಲೇ ಹೊಡೆದಾಡಿಕೊಂಡ ಪೊಲೀಸರು!

Police constables  v/s assistent sub inspector fight

11-07-2018

ಬೆಂಗಳೂರು: ಹುಳಿಮಾವು ಪೊಲೀಸ್ ಪೇದೆಗಳು ಮೈಕೋ ಲೇಔಟ್ ಎಎಸ್ಐ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬನ್ನೇರುಘಟ್ಟ ರಸ್ತೆ ಅರಕೆರೆ ಗೇಟ್ ಬಳಿಯ ಎಂಪೈರ್ ಹೋಟೆಲ್ ನಲ್ಲಿ ಪೊಲೀಸರ ನಡುವೇ ಹೊಡೆದಾಟ ನಡೆದಿದೆ.

ಕಳೆದ ಮಂಗಳವಾರದಿಂದ ಮಾಮೂಲಿ ವಿಚಾರಕ್ಕಾಗಿ ಹೊತ್ತಿಕೊಂಡಿದ್ದ ಜಗಳ ನಿನ್ನೆ ರಾತ್ರಿ ಸ್ಟೋಟಗೊಂಡಿದ್ದು, ಕಳೆದ ರಾತ್ರಿ ಎಂಪೈರ್ ಹೋಟೆಲ್ ಗೆ ಕುಡಿದು ಹೋಗಿ ಗಲಾಟೆ ಮಾಡಿದ ಹುಳಿಮಾವು ಪೊಲೀಸ್ ಠಾಣೆಯ ಇಬ್ಬರು ಕ್ರೈಂ ಪೇದೆಗಳು ಗಲಾಟೆ ಯಾಕೆ ಮಾಡ್ತೀರಿ ಅಂತ ಪ್ರಶ್ನಿಸಿದ ಎಂಪೈರ್ ಹೊಟೇಲ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದರು.

ಹೊಟೇಲ್ ಸಿಬ್ಬಂದಿ ಮೈಕೋ ಲೇಔಟ್ ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಮೈಕೋ ಲೇಔಟ್ ಪಿಸಿ, ಎಎಸ್ಐ ಮೇಲೆಯೂ ಹುಳಿಮಾವು ಕ್ರೈಂ ಪಿಸಿಗಳಿಂದ ಹಲ್ಲೆ ನಡೆದಿದೆ. ಕುಡಿದ ಮತ್ತಿನಲ್ಲಿ ಪೊಲೀಸರ ಹಲ್ಲೆಯಿಂದಾಗಿ ಮೈಕೋ ಲೇಔಟ್ ಎಎಸ್ಐ ತಲೆ, ಮುಖಕ್ಕೆ ಗಾಯಗಳಾಗಿವೆ.

ಪೊಲೀಸ್ vs ಪೊಲೀಸ್ ಹೊಡೆದಾಟ ಕಂಡು ಎಂಪೈರ್ ಹೊಟೇಲ್ ಸಿಬ್ಬಂದಿ ಮತ್ತು  ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಪ್ರಕರಣ ಗಂಭೀರತೆ ಅರಿತು, ಪೊಲೀಸರಿಂದ ಪ್ರಕರಣ ಮುಚ್ಚಿಹಾಕುಲು ತೆರೆ ಮರೆ ಕಸರತ್ತು ಮುಂದುವರಿದಿದೆ. ಹುಳಿಮಾವು ಕ್ರೈಂ ಪಿಸಿಗಳ ಪುಂಡಾಟ, ಹೊಡೆದಾಟ ದೃಶ್ಯಗಳು ಎಂಪೈರ್ ಹೊಟೇಲ್ ಸಿಸಿಟಿವಿಯಲ್ಲಿ ಸೆರೆಯಾಗಿವೆ.


ಸಂಬಂಧಿತ ಟ್ಯಾಗ್ಗಳು

constables sub inspector ಕ್ರೈಂ ಎಎಸ್ಐ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ