ಕ್ಲಾಸ್ ಲೀಡರ್ ಆಗಲಿಲ್ಲ ಎಂದು ಬಾಲಕ ಆತ್ಮಹತ್ಯೆ

An 14 years boy committed suicide for silly reason

11-07-2018

ಬೆಂಗಳೂರು: ಶಾಲೆಯಲ್ಲಿ ಕ್ಲಾಸ್ ಲೀಡರ್ ಆಗಿ ಆಯ್ಕೆಯಾಗದಿರುವುದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿಯೊಬ್ಬ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಳಿಯ ಮನೆಯಲ್ಲಿ ನೇಣಿಗೆ ಶರಣಾಗಿರುವ ದಾರುಣ ಘಟನೆ ನಿನ್ನೆ ರಾತ್ರಿ ನಡೆದಿದೆ.

ಬಾಲ್ಡ್ವಿನ್ ಸ್ಕೂಲ್‍ನಲ್ಲಿ 9ನೇ ತರಗತಿ ಓದುತ್ತಿದ್ದ ಧೃವರಾಜ್ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸ್ಕೂಲ್‍ನಲ್ಲಿ ಕ್ಲಾಸ್ ಲೀಡರ್ ಆಗಿ ಆಯ್ಕೆಯಾಗದಿರುವುದಕ್ಕೆ ನೊಂದಿದ್ದ ಧೃವರಾಜ್, ನಿನ್ನೆ ಶಾಲೆಗೆ ಹೋಗಿ ಐಡಿಯಲ್ ಹೋಮ್ಸ್ ಚಿತ್ರ ಅಪಾರ್ಟ್‍ಮೆಂಟ್‍ ನಲ್ಲಿರುವ ಮನೆಗೆ ವಾಪಸ್ಸಾಗಿದ್ದಾನೆ.

ರಾತ್ರಿ 101.15ರ ವೇಳೆ ಮನೆಯಲ್ಲಿ ತಾಯಿ ದಿವ್ಯಾ ಸೇರಿ ಎಲ್ಲರೂ ಮಲಗಿದ್ದಾಗ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ರಾಜರಾಜೇಶ್ವರಿ ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮತ್ತೊಂದೆಡೆ ಜೀವನದಲ್ಲಿ ಜುಗುಪ್ಸೆಯಿಂದ ಮೂಡಲಪಾಳ್ಯದ ಶಿವಾನಂದ ನಗರದ ಮಹದೇವಸ್ವಾಮಿ (23) ಎಂಬ ಯುವಕ ನೇಣಿಗೆ ಶರಣಾಗಿದ್ದಾರೆ. ಮಂಗಳವಾರ ಕೆಲಸಕ್ಕೆ ಹೋಗಿ ಮನೆಗೆ ಬಂದಿದ್ದ ಮಹದೇವಸ್ವಾಮಿ, ಸಂಜೆ 5.45ರ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿರುವ ಚಂದ್ರಾಲೇಔಟ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

class leader suicide ಸ್ಕೂಲ್ ಅಪಾರ್ಟ್‍ಮೆಂಟ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ